ಮನೆ ಶುಚಿಯಾಗಿ, ಮನ ಶುದ್ಧಿಯಾಗಿರಲಿ

 ಚಿತ್ರದುರ್ಗ. ಅ.೧೫;ಮನೆ ಶುಚಿಯಾಗಿರಬೇಕು ಹಾಗೂ ಮನ ಶುದ್ದವಾಗಿರಬೇಕು ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು. ಶ್ರೀಗಳು ಶರಣಸಂಸ್ಕೃತಿ ಉತ್ಸವ-2021ರ ಅಂಗವಾಗಿ  ಶ್ರೀಮಠದ ಅನುಭವ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಸಹಜಶಿವಯೋಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಎಲ್ಲರೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಸ್ವಚ್ಛತಾ ಕಾರ್ಯವನ್ನು ಮಾಡಿ ಉತ್ತಮವಾದ ವಾತಾವರಣದಲ್ಲಿ ಬದುಕಬೇಕು. ಕಸದೊಂದಿಗೆ ಬದುಕು ಬೇಡ. ನಿಮ್ಮ ಮನೆಯನ್ನು ಶುಚಿಯಾಗಿ ಇಟ್ಟುಕೊಂಡ ಹಾಗೆ ನಿಮ್ಮ ಮನವನ್ನು ಶುದ್ಧಿಯಾಗಿಟ್ಟುಕೊಳ್ಳಬೇಕು. ಜನರ, ಸಮಾಜದ ಉದ್ಧಾರಕ್ಕಾಗಿ,  ನಮ್ಮ ಇಡೀ ಜೀವನವನ್ನು ಸವೆಸುತ್ತಾ ಬಂದಿದ್ದೇವೆ. ಬೆಂಗಳೂರು, ಮೈಸೂರು, ತುಮಕೂರು ಸೇರಿದಂತೆ ರಾಜ್ಯದ ಹಲವೆಡೆ ನಮ್ಮ ಶಾಖಾಮಠಗಳಿವೆ. ನಾವು ಬೆಂಗಳೂರಿನಲ್ಲಿ ಲಕ್ಷಾಂತರ ಭಕ್ತರನ್ನು ಗಣಮೇಳದಲ್ಲಿ ಸೇರಿಸಿದೆವು. ಇದರಲ್ಲಿ ಎಲ್ಲಾ ಧರ್ಮದ ಶರಣರನ್ನು ಒಗ್ಗೂಡಿಸಿದ್ದೆವು. ಬಸವಣ್ಣನವರು ಮುತ್ಸದ್ದಿಯಾಗಿದ್ದವರು. ಕಳ್ಳರನ್ನು ಅನುಭವಮಂಟಪದ ಮಹಾಮನೆಗೆ ಬಿಡಿಸಿಕೊಂಡರು. ಕಳ್ಳನಲ್ಲಿಯೂ ಕೂಡಲಸಂಗಮನನ್ನು ಕಂಡವರು ಬಸವಣ್ಣನವರು. ಆ ದಿಸೆಯಲ್ಲಿ ನಾವು ಯೋಚಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ಪ್ರಾರ್ಥಿಸಿ, ನೀರಮಾನ್ವಿ ಬಸವಕೇಂದ್ರದ ಶರಣ ಬಸವ ನಿರೂಪಿಸಿದರು.