ಮನೆ ಮೇಲ್ಛಾವಣಿ ಕುಸಿದು ವ್ಯಕ್ತಿ ಸಾವು

(ಸಂಜೆವಾಣಿ ವಾರ್ತೆ)
ಬ್ಯಾಡಗಿ,ಜು29: ತಾಲೂಕಿನ ತಿಮಕಾಪುರ ಗ್ರಾಮದಲ್ಲಿ ಮನೆಯ ಮೇಲ್ಛಾವಣಿ ಕುಸಿದು ಓರ್ವ ವ್ಯಕ್ತಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಕಲ್ಲಪ್ಪ ನಾಗಪ್ಪ ಅಂಗರಗಟ್ಟಿ(50) ಎನ್ನಲಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮನೆಯೂ ಸೋರುತ್ತಿದ್ದು, ಅದನ್ನು ತಡೆಯಲು ದಿ.26ರಂದು ಬೆಳಿಗ್ಗೆ 7ಗಂಟೆಯ ಸುಮಾರಿಗೆ ಮೇಲ್ಛಾವಣಿಗೆ ತಗಡಿನ ಶೀಟ್ ಹಾಕುವ ಸಂದರ್ಭದಲ್ಲಿ ಮನೆಯ ಮೇಲ್ಛಾವಣಿ ದಿಢೀರನೆ ಕುಸಿದು ಬಿದ್ದು, ಅದರೊಂದಿಗೆ ಕಲ್ಲಪ್ಪನು ಬಿದ್ದಿದ್ದಾನೆ. ಈ ಸಂದರ್ಭದಲ್ಲಿ ಕಲ್ಲಪ್ಪನ ತಲೆಗೆ ತೀವ್ರವಾದ ಗಾಯವುಂಟಾಗಿದ್ದು, ಕೂಡಲೇ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿಂದ ಹೆಚ್ಚಿನ ಮಾಹಿತಿಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಅವರು 27ರಂದು ರಾತ್ರಿ ಸುಮಾರು 8.30ರ ಹೊತ್ತಿಗೆ ಮೃತಪಟ್ಟಿದ್ದಾರೆ ಎಂದು ಪೆÇಲೀಸ್ ವರದಿಯಲ್ಲಿ ತಿಳಿಸಲಾಗಿದೆ.

ಈ ಕುರಿತಂತೆ ತಾಲೂಕಿನ ಕಾಗಿನೆಲೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.