ಮನೆ ಮೇಲ್ಛಾವಣಿ ಕುಸಿದು ವೃಕ್ತಿಸಾವು


ಸಿರಗುಪ್ಪ:  ತಾಲೂಕಿನ ಹಚ್ಚೋಳ್ಳಿ ಹೋಬಳಿಯ ನಾಡಂಗ ಗ್ರಾಮದ ನಿವಾಸಿಯಾದ ಗಾದಿಲಿಂಗಪ್ಪ ತಂದೆ ಸಣ್ಣ ಲಿಂಗಪ್ಪ ವಯಸ್ಸು 26 ಜಾತಿ ಕುರುಬ ಜನಾಂಗದ ವ್ಯಕ್ತಿಯು ನಿನ್ನೆ  ತಮ್ಮ ಮನೆಯ ಮುಂದೆ ಮಲಗಿ ಕೊಂಡಾಗ‌ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಸಂಭವಿಸಿದೆ. ತಾಲ್ಲೂಕಿನಲ್ಲಿ ಸುರಿದ ಭಾರಿ ಮಳೆ ಯಿಂದಾಗಿ ಮನೆ ಕುಸಿತದಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದ್ದು ಸಿರುಗುಪ್ಪ ಪೋಲಿಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.