ಮನೆ ಮನೆ ಮತಗಟ್ಟೆ ಸಮೀಕ್ಷೆ

ಇಂಡಿ:ನ.21:ಪಟ್ಟಣದ ವಿವಿಧ ವಾರ್ಡಗಳಿಗೆ ಉಪವಿಭಾಗಾಧಿಕಾರಿ ರಾಮಚಂದ್ರ ಗಡದೆ ಹಾಗೂ ತಹಸಿಲ್ದಾರ ನಾಗಯ್ಯ ಹಿರೇಮಠ ಅವರು ಮತದಾರ ಮನೆ ಮನೆಗೆ ಭೇಟಿ ನೀಡಿ ಮತಗಟ್ಟೆ ಸಮೀಕ್ಷೆಯ ವಿಶೇಷ ನೋಂದಣಿ ಅಭಿಯಾನದ ಕುರಿತು 1 ರಿಂದ 17ನೇ ವಾರ್ಡಗಳಿಗೆ ಖುದ್ದಾಗಿ ಮಾಹಿತಿ ಸಂಗ್ರಹಿಸುವ ಮೂಲಕ ಪರಿಶೀಲನೆ ಮಾಡಿದರು.

ಎಸಿ ರಾಮಚಂದ್ರ ಗಡದೆ ಹಾಗೂ ತಹಸಿಲ್ದಾರ ನಾಗಯ್ಯ ಹಿರೇಮಠ ಮತದಾರನ್ನು ವಿಚಾರಿಸಿ ತಮ್ಮ ಮನೆಗೆ ಬಿಎಲ್‍ಒಗಳು ಬಂದು ಆಧಾರ ಕಾರ್ಡ ಮತ್ತು ಮತದಾರರ ಗುರ್ತಿನ ಚಿಟ್ಟಿ ಕಲೆ ಹಾಕಿದ ಮಾಹಿತಿ ಪಡೆದರು.

ಒಂದು ವೇಳೆ ಅವರು ಸರಿಯಾಗಿ ಮಾಹಿತಿ ನೀಡದೆ ಬೇಕಾ ಬಿಟ್ಟಿಯಾಗಿ ಎಲ್ಲೋ ಕುಳಿತು ಮತಗಟ್ಟೆ ಸಮೀಕ್ಷೆಯ ವಿಶೇಷ ನೋಂದಣಿ ಅಭಿಯಾನದ ಮಾಡಿದರೆ ಸಾಲದು. ಖುದ್ದಾಗಿ ಮತದಾರರ ಮನೆ ಬಾಗೀಲಿಗೆ ಬಂದು ಕಡ್ಡಾಯವಾಗಿ ಸಮೀಕ್ಷ ಮಾಡಬೇಕು. ಇದನ್ನು ಮತದಾರರಿಗೆ ತಿಳಿಯದೆ ಹೋದರೆ ತುಂಬಾ ತೊಂದರೆಯಾಗುತ್ತದೆ. ಆದ್ದರಿಂದ ಬಿಎಲ್‍ಒಗಳು ಸರಿಯಾಗಿ ತಮ್ಮ ಜವ್ಬಾರಿಯನ್ನು ಅರಿತು ಕೆಲಸ ಮಾಡಬೇಕು ಒಂದು ವೇಳೆ ಬೆಜವಾಬ್ದಾರಿ ಕರ್ತವ್ಯ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಚ್ಚರಿಕೆ ನೀಡಿದರು.

ಇಂಡಿ ವಿಧಾನಸಭಾ ಮತಕ್ಷೇತ್ರದ 268 ಮತಗಟ್ಟೆಗಳಿಗೆ ಮತಗಟ್ಟೆ ಅಧಿಕಾರಿಗಳು ಹಾಗೂ ಮತಗಟ್ಟೆ ಮೆಲ್ವಿಚಾರಕರು ಕೂಡಾ ಖುದ್ದಾಗಿ ಮನೆ ಮನೆಗೆ ಭೇಟಿ ನೀಡಿ ನೊಂದಣಿ ಅಭಿಯಾನ ಕಾರ್ಯ ನಡೆಸಿದ್ದಾರೆ ಎಂದು ತಹಸಿಲ್ದಾರ ನಾಗಯ್ಯ ಹೀರೆಮಠ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಪ್ರದೀಪ ದೊಡ್ಡಮನಿ, ಬಿಎಲ್‍ಒಗಳಾದ ಮಹಿಬುಬು ಲಕ್‍ಡಹಾರ, ಪ್ರಯಾಂಕ ಕಾಲೆಬಾಗ, ಸರಸ್ವತಿ ಜೋಶಿ, ಚಂದು ವಾಲಿಕಾರ, ರಾಜು ಇಂಡಿಕರ, ಎಸ್.ಜಿ.ನಂದರಗಿ ಮತ್ತಿತರಿದ್ದರು.