ಮನೆ ಮನೆಯಲ್ಲಿ ಸಾಹಿತ್ಯ ಗೋಷ್ಠಿ

ಶಿರಹಟ್ಟಿ,ಆ3: ಕನ್ನಡ ನಾಡಿನ ಚರಿತ್ರೆಯಲ್ಲಿ 12 ನೇ ಶತಮಾನ ಸುವರ್ಣಾಕ್ಷರಗಳಿಂದ ಬರೆದಿಡುವಂತಹಕಾಲವಾಗಿತ್ತು. ಅದು ಸಾಮಾಜಿಕ ಕ್ರಾಂತಿಯನ್ನು ಮಾಡಿದ ಕಾಲ, ಉಪನಿಷತ್‍ಗಳಲ್ಲಿರುವ ತತ್ವ ಸಂದೇಶಗಳು ವಚನ ಸಾಹಿತ್ಯದಲ್ಲಿವೆ. ವಚನ ಸಾಹಿತ್ಯ ಸಾಮಾಜಿಕ ಬದಲಾವಣೆಗಾಗಿ ಹೊಂದಿರುವ ವಿಚಾರಗಳು ಅಮೋಘವಾದದು ಮತ್ತು ಸರ್ವಕಾಲಕ್ಕೂ ಒಪ್ಪುವಂತಹುದಾಗಿವೆ ಎಂದು ಶರಣ ಸಾಹಿತ್ಯ ಪರಿಷತ್‍ನ ತಾಲೂಕ ಘಟಕದ ಅಧ್ಯಕ್ಷ ಕೆ.ಎ.ಬಳಿಗೇರ ಹೇಳಿದರು.
ಅವರು ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿಎಮ್.ಸಿ.ಮರಡೂರಮಠ ರವರ ಮಹಾಮನೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‍ನ ಗ್ರಾಮ ಘಟಕ ಮತ್ತು ಶರಣ ಸಾಹಿತ್ಯ ಪರಿಷತ್ ಗ್ರಾಮ ಘಟಕದವತಿಯಿಂದ ಜರುಗಿದ ಮನೆ ಮನೆಯಲ್ಲಿ ಸಾಹಿತ್ಯ ಗೋಷ್ಠಿಕಾರ್ಯಕ್ರಮದಲ್ಲಿ ಉಪನ್ಯಾಸದಲ್ಲಿ ಮಾತನಾಡಿದರು.
ವಚನ ಸಾಹಿತ್ಯ ಕನ್ನಡ ನಾಡು ನುಡಿಗೆ ಸಾಕಷ್ಟು ಶಕ್ತಿಯನ್ನು ತುಂಬಿದ ಕೀರ್ತಿ ಸಲ್ಲುತ್ತದೆ. ವಚನ ಸಾಹಿತ್ಯದಲ್ಲಿರುವ ವಿಷಯ ಸಾರ ಬಹಳಷ್ಟು ವಿಶಾಲ ದೃಷ್ಠಿಕೋನ ಮತ್ತು ಸಮಾಜಿಕ ಜಿಡ್ಡನ್ನು ಬಿಡಿಸುವ ಕಾರ್ಯವನ್ನು ಮಾಡುತ್ತದೆ. ವಚನ ಸಾಹಿತ್ಯ ಶಬ್ದಗಳ ಬಂಢಾರ, ಸಾಮಾನ್ಯ ವಿಚಾರಗಳಿಲ್ಲದೇ ಅತ್ಯಂತ ಶ್ರೇಷ್ಠಮಟ್ಟದ ಅವಲೋಕನೆಗಳನ್ನು ಒಳಗೊಂಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬನ್ನಿಕೊಪ್ಪ ಬ್ರಹನ್ಮಠದ ಶ್ರೀ ಷ.ಭ್ರ.ಡಾ.ಸುಜ್ಞಾನದೇವ ಶಿವಾಚಾರ್ಯ ಮಹಾಸ್ವಾಮಿಜಿಗಳು ಮಾತನಾಡಿ, ಮನೆ ಮನೆಗೆ ಸಾಹಿತ್ಯದ ಬೆಳವಣಿಗೆಯಾಗಬೇಕಾಗಿರುವುದು ಅಗತ್ಯವಿದ್ದು, ಈ ಮೂಲಕ ಕನ್ನಡ ಸಾಹಿತ್ಯ ಬೆಳವಣಿಗೆಯ ಜೊತೆಗೆ ಶರಣರ ಸಂದೇಶಗಳು ಕೂಡಾ ಜನಮನದಲ್ಲಿ ಸ್ಥಿತಸ್ಥಾಯಿಯಾಗಿ ಉಳಿಯುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ ಗ್ರಾಮ ಘಟಕದ ಆದ್ಯಕ್ಷ ಬಿ,ಎಮ್.ಯರಕದ, ಶಿವಪ್ರಕಾಶ ಮಹಾಜನಶೆಟ್ಟರ, ಆರ್.ಅರ್.ಗಡ್ಡದ್ದೇವರಮಠ, ಎಫ್.ಜಿ,ಪಾಟೀಲ್,ಕಸಾಪ ಗ್ರಾಮ ಘಟಕದ ಅಧ್ಯಕಷ ಗಿರೀಶ ಕೊಡಬಾಳ. ತಿಮ್ಮರೆಡ್ಡಿ ಮರಡ್ಡಿ, ಮೋಹನ ಗುತ್ತೆಮ್ಮನವರ, ಬಿ. ವೆಂಕಟೇಶ, ಕೆ.ಡಿ.ಕುಲಕರ್ಣಿ ಕೊಟ್ರೇಶ ಸಜ್ಜನವರ, ಫಕ್ಕಿರೇಶ ರಟ್ಟಿಹಳ್ಳಿ, ಎಮ್.ಬಿ.ಹಾವೇರಿ, ರಾಘವೇಂದ್ರ ಇಚ್ಚಂಗಿ, ವಿ.ಜಿಅಂಗಡಿ, ಎಚ್. ಮಲ್ಲಿಕಾರ್ಜುನ ರೆಡ್ಡಿ, ಬಿ.ವಿ.ಮುಳಗುಂದ, ಎಸ್.ಎಫ್ ಮಠದ, ಮುಂತಾದವರು ಉಪಸ್ಥಿತರಿದ್ದರು.