ಮನೆ ಮನೆಯಲ್ಲಿ ರಾಷ್ಟ್ರ ಧ್ವಜಾರೋಹಣ ಮಂಜುನಾಥ

ಸಿಂಧನೂರ.ಆ.೬- ಆಗಷ್ಷ ೧೩ ರಿಂದ ೧೫ ತನಕ ಪ್ರತಿ ಮನೆಮನೆಗಳಲ್ಲಿ ತಪ್ಪದೆ ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ ರಾಷ್ಟ್ರಪ್ರೇಮ ಹಾಗೂ ಭಕ್ತಿ ಮೆರೆಯಬೇಕು ಎಂದು ನಗರ ಸಭೆಯ ಪೌರಾಯುಕ್ತ ಮಂಜುನಾಥ ಗುಂಡುರ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ನಗರ ಸಭಯ ಆವರಣದಲ್ಲಿ ಶ್ರೀ ಶಕ್ತಿ ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ರಿಯಾತಿ ದರದಲ್ಲಿ ರಾಷ್ಟ್ರಧ್ವಜ ವಿತರಿಸಿ ಮಾತನಾಡಿದ ಅವರು ೧೩೦ ಶ್ರೀಶಕ್ಕಿ ಸ್ವಸಹಾಯ ಗುಂಪು ಗಳಲ್ಲಿ ಇಂದು ೧೩ ಶ್ರೀಶಕ್ತಿ ಗುಂಪುಗಳ ಮಹಿಳೆಯರಿಗೆ ರಾಷ್ಟ್ರಧ್ವಜ ವಿತರಿಸಲಾಗಿದೆ ಮುಂದೆ ಉಳಿದ ಗುಂಪುಗಳ ಮಹಿಳೆಯರಿಗೆ ವಿತರಿಸಲಾಗುತ್ತದೆ ಎಂದು ಪತ್ರಿಕೆಗೆ ಪೌರಾಯುಕ್ತ ಮಂಜುನಾಥ ಗುಂಡುರ ತಿಳಿಸಿದರು.
ನಗರದ ನಾಗರಿಕರು ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು ಅದರಲ್ಲಿತಾಯಂದಿಯರು ಅಕ್ಕ.ತಂಗಿಯರು ಅಗಷ್ಷ ೧೩ ರಿಂದ ಅಗಷ್ಷು೧೫ ರ ತನಕ ಮನೆಯ ಮುಂದೆ ರಂಗೋಲಿ ಹಾಕಿ ವಿವಿಧ ತಳೀರು ತೋರಣಗಳಿಂದ ಸಿಂಗಾರ ಗೋಳಿಸಿ ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸಿ ದೇಶ ಪ್ರೇಮ ತೋರಿಸಬೇಕು ಎಂದರು.
ನಗರ ಸಭೆಯ ಉಪಾಧ್ಯಕ್ಷ ರಾದ ಮುರ್ತಜ ಹುಸೇನ ನಗರ ಸಭೆಯ ಸಿ.ಒ ದುರ್ಗಪ್ಪ ಹಸ್ಮಕಲ್ ಸೇರಿದಂತೆ ಶ್ರೀಶಕ್ತಿ ಸ್ವಸಹಾಯ ಗುಂಪುಗಳ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.