ಮನೆ ಮನೆಗೆ 24+7 ಕುಡಿಯುವ ನೀರು ಸಂಪರ್ಕಕ್ಕೆ ಶಾಸಕ ರಿಂದ ಚಾಲನೆ

ಗಂಗಾವತಿ ಏ 24 : ಸಮೀಪದ ಗಡ್ಡಿ ಮತ್ತು ಬಟಾರ ನರಸಪೂರು ಗ್ರಾಮದಲ್ಲಿ ಇಂದು ಜಲ್ ಜೀವನ ಮಿಷನ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಮನೆ ಮನೆಗೆ 24+7 ಕುಡಿಯುವ ನೀರು ಸಂಪರ್ಕಕ್ಕೆ ಶಾಸಕ ಪರಣ್ಣ ಮುನವಳ್ಳಿ ಭೂಮಿ ಪೂಜೆ ನೆರವೇರಿಸಕದರು.
ಬಳಿಕ ಮಾತನಾಡಿದ ಶಾಸಕರು, ಗಂಗಾವತಿ ವಿಧಾನ ಸಭಾ ಕ್ಷೇತ್ರದಲ್ಲಿ ಯಾವುದೇ ರೀತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರಬಾರದು. ಆದಕಾರಣ ಪ್ರತಿಯೊಬ್ಬರು ನೀರನ್ನು ಮಿತವಾಗಿ ಬಳಸಬೇಕು. ಮುಂದಿನ ದಿನಮಾನಗಳಲ್ಲಿ ಗ್ರಾಮಕ್ಕೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ಬಿಜೆಪಿ ಗ್ರಾಮೀಣ ನಗರ ಮಂಡಲ ಅಧ್ಯಕ್ಷ ಚನ್ನಪ್ಪ ಮಳಿಗಿ , ಎಪಿಎಂಸಿ ಮಾಜಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ, ಬಗರ ಹುಕಂ ಅಕ್ರಮ ಸಕ್ರಮ ಸಮಿತಿಯ ಸದಸ್ಯ ಸಿದ್ದಲಿಂಗಯ್ಯ ಗಡ್ಡಿಮಠ, ಬಿಜೆಪಿ ಮುಖಂಡ ಶರಣಯ್ಯಸ್ವಾಮಿ ಉಡುಮಕಲ್ , ಗ್ರಾ.ಪಂ.ಸದಸ್ಯರಾದ ಬಾಲಪ್ಪ ಮಾನೇಳ ಬಸವನಗೌಡ ಪೊಲೀಸ್ ಪಾಟೀಲ್ ಪರಸಪ್ಪ ಮುಖಂಡರಾದ ಹೇಮಂತರಾಜ್ ಮಾಜಿ.ಗ್ರಾ.ಪಂ.ಸದಸ್ಯರಾದ ಹುಲಗಪ್ಪ ಮಲ್ಲಪ್ಪ ಕುಂಬಾರ ಸೇರಿದಂತೆ ಇತ್ತರರು ಇದ್ದರು