ಮನೆ ಮನೆಗೆ ಹಣತೆ ವಿತರಿಸುವ ಮೂಲಕ ಜಾಗೃತಿ

ಮೈಸೂರು, ನ.13: ಅರಿವು ಸಂಸ್ಥೆಯ ವತಿಯಿಂದ ಪಟಾಕಿ ತ್ಯಜಿಸಿ ದೀಪ ಬೆಳಗಿಸಿ ಎಂದು ಚಾಮುಂಡಿಪುರಂ ವೃತ್ತದಲ್ಲಿ ಉದ್ಘಾಟಿಸಲಾಯಿತು ನಂತರ ಚಾಮುಂಡಿಪುರಂ ಸುತ್ತಮುತ್ತಲಿನಲ್ಲಿರುವ ಮನೆ ಮನೆಗೆ ಹಣತೆ ವಿತರಿಸುವ ಮೂಲಕ ವಿಶೇಷವಾಗಿ ಜಾಗೃತಿ ಮೂಡಿಸಲಾಯಿತು
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ ದೀಪಾವಳಿ ಸಂದರ್ಭದಲ್ಲಿ ಮನೆಯ ಹೊರಗೂ ಮತ್ತು ಒಳಭಾಗದಲ್ಲಿ ಕೂಡ ಮಣ್ಣಿನ ಹಣತೆಯಲ್ಲಿ ದೀಪ ಬೆಳಗುವುದೇ ಶ್ರೇಷ್ಠ’ ಎಂದು ಮನೆ ಮನೆಗೂ ತೆರಳಿ ಹಣತೆ
ಕಳೆದ 10 ವರ್ಷದಿಂದ ನಿರಂತರವಾಗಿ ಅರಿವು ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಕೆಲಸ
ಪ್ರತಿ ಮನೆಯಲ್ಲಿ ಸಂಜೆ ಹೊತ್ತಿನಲ್ಲಿ ದೀಪ ಬೆಳಗುವ ಸಂಪ್ರದಾಯ ತಲೆತಲಾಂತರದಿಂದ ಬಂದಿದೆ. ದೇವರ ಪೂಜೆಯಲ್ಲಿ, ಬಾಗಿಲ ಮುಂದೆ ಕತ್ತಲು ಆವರಿಸುವ ಸ್ಥಳದಲ್ಲಿ ದೀಪದ ಬೆಳಕು ಅನಿವಾರ್ಯ. ಸಂಪ್ರದಾಯದಂತೆ ದೀಪಾವಳಿ ಹಬ್ಬಕ್ಕೆ ಕಡ್ಡಾಯವಾಗಿ ಹೊಸ ಮಣ್ಣಿನ ಹಣತೆ ಕೊಳ್ಳುವುದು ವಾಡಿಕೆ.ಎಂದು ಹೇಳಿದರು
ನಂತರ ಮಾತನಾಡಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ದೀಪಾವಳಿ ಹಬ್ಬದಂದು ಎಲ್ಲರೂ ದೀಪಗಳನ್ನು ಹಚ್ಚುವುದರ ಮೂಲಕ ಪರಿಸರ ಸಂರಕ್ಷಣೆ ಮಾಡುವ ರೀತಿಯಲ್ಲಿ ಆಚರಿಸಬೇಕು. ಯಾರು ಪಟಾಕಿಗಳನ್ನು ಸಿಡಿಸದೇ ಪರಿಸರವನ್ನು ಕಾಪಾಡುವಂತಹ ಕೆಲಸ ಮಾಡಬೇಕೆ?
ಪಟಾಕಿಗಳನ್ನು ಸಿಡಿಸುವುದರಿಂದ ನಮ್ಮ ಸುತ್ತಮುತ್ತಲಿನ ವಾಯು ಮಾಲಿನ್ಯವಾಗಿ ಪರಿಸರದಲ್ಲಿ ಅನೇಕ ಏರುಪೇರುಗಳು ಉಂಟಾಗುತ್ತದೆ. ಇದರಿಂದ ನಾವೆಲ್ಲ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ. ಈಗಾಗಲೇ ಪರಿಸರ ನಾಶದಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಆದ್ದರಿಂದ ನಾವೆಲ್ಲರೂ ಪರಿಸರವನ್ನು ಸಂರಕ್ಷಣೆ ಮಾಡುವಂತಹ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಇಡೀ ಜೀವರಾಶಿ ನಾಶವಾಗುತ್ತದೆ ಎಂದರು.
ದೀಪಾವಳಿ ಹಬ್ಬ ಎಂದರೆ ದೀಪಗಳನ್ನು ಹಚ್ಚಿ ಆಚರಣೆ ಮಾಡುವುದನ್ನು ಬಿಟ್ಟು ಪ್ರತಿಯೊಬ್ಬರು ಪಟಾಕಿ ಸಿಡಿಸಿ ಪರಿಸರವನ್ನು ಹಾಳು ಮಾಡುತ್ತಾರೆ. ದೀಪಾವಳಿ ಹಬ್ಬ ನಡೆದು ಬಂದ ಹಾದಿಯನ್ನು ಎಲ್ಲರೂ ತಿಳಿದು ಹಬ್ಬ ಆಚರಣೆ ಮಾಡಬೇಕು. ಮುಖ್ಯವಾಗಿ ಪಟಾಕಿ ಸಿಡಿಸುವುದರಿಂದ ಪರಿಸರ ಮಾಲಿನ್ಯದ ಜೊತೆಗೆ ಅನೇಕ ಪುಟಾಣಿ ಮಕ್ಕಳು ಕಣ್ಣುಗಳನ್ನು ಕಳೆದುಕೊಂಡಿದ್ದಾರೆ, ಗಾಯಗಳನ್ನು ಮಾಡಿ
ಕೊಂಡಿದ್ದಾರೆ. ಆದ್ದರಿಂದ ದೀಪಾ
ವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕೆ ಹೊರತು ಅನಾಹುತಗಳು ಸಂಭವಿಸುವ ಹಾಗೆ ಆಚರಣೆ ಮಾಡಬಾರದು ಎಂದರು.
ನಂತರ ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ಮಾತನಾಡಿ ಪರಿಸ್ಥಿತಿಯ ಅರಿವಿದ್ದೂ ಪಟಾಕಿ ತಯಾರಿಸಿದ್ದೇಕೆ?
ಕೊರೊನಾ ಸೋಂಕಿನ ಈ ಗಂಭೀರ ಪರಿಸ್ಥಿತಿಯಲ್ಲಿ ಜನರು ಜೀವವನ್ನು ಕೈಯಲ್ಲಿ ಹಿಡಿದು ಜೀವಿಸುತ್ತಿರುವಾಗ, ಕೋವಿಡ್ ರೋಗದ ತೀವ್ರತೆಗೆ ಕಾರಣವಾಗುವ ಪಟಾಕಿ ಸಿಡಿಸುವುದನ್ನು ನಿಷೇಧಿಸಬೇಕಾದುದು ಸರ್ಕಾರದ ಆದ್ಯತೆಯಾಗಬೇಕು. ಅನೇಕ ರಾಜ್ಯಗಳು ಈಗಾಗಲೇ ನಿಷೇಧ ಹೇರಿವೆ. ಆದರೆ ನಿಷೇಧಿಸುತ್ತೇನೆಂದು ಹೊರಟ ನಮ್ಮ ರಾಜ್ಯ ಸರ್ಕಾರ ಕೂಡಲೇ ತನ್ನ ನಿರ್ಧಾರ ಬದಲಿಸಿ ಹಸಿರು ಪಟಾಕಿಗೆ ನಿಶಾನೆ ತೋರಿದ್ದು ಯಾವ ಕಾರಣಕ್ಕಾಗಿ?
ಜನರ ಜೀವಕ್ಕಿಂತ ಪಟಾಕಿ ಉದ್ಯಮಿಗಳ ಹಿತ ಕಾಯುವುದು ಅಷ್ಟು ಮುಖ್ಯವೇ? ಅವರಿಗೆ ಏಳೆಂಟು ತಿಂಗಳಿನಿಂದ ಕಾಡುತ್ತಿರುವ ಈ ಪರಿಸ್ಥಿತಿಯ ಅರಿವಿದ್ದೂ ಪಟಾಕಿ ತಯಾರಿಸಬೇಕಿತ್ತೇ? ಸ್ವಲ್ಪ ಅವಕಾಶ ಕೊಟ್ಟರೆ ಪರಿಸ್ಥಿತಿಯ ಗಂಭೀರತೆಯನ್ನು ಅರಿಯದೆ ಹುಚ್ಚೆದ್ದು ಕುಣಿಯುವ ಜನರೇ ಅಧಿಕವಾಗಿರುವಾಗ ಇವರನ್ನು ಸರ್ಕಾರ ಹೇಗೆ ನಿಯಂತ್ರಿಸುತ್ತದೆ? ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬರುತ್ತಿರುವ ಕೊರೊನಾ ಸೋಂಕನ್ನು ಯಾವುದೇ ಬಗೆಯ ಪಟಾಕಿಯಾಗಿರಲಿ ಅದರ ಹೊಗೆ ತೀವ್ರಗೊಳಿಸುತ್ತದೆ ಎಂಬ ಅರಿವು ಸರ್ಕಾರಕ್ಕೆ ಇರಬೇಕು. ಈಗಲೂ ತಡಮಾಡದೆ ಪಟಾಕಿ ನಿಷೇಧಕ್ಕೆ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಜನರ ಆರೋಗ್ಯ? ಪ್ರಾಣ ರಕ್ಷಿಸಲಿ.
ಇದೇ ಸಂದರ್ಭದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ,ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ , ಕಾಂಗ್ರೆಸ್ ಯುವ ಮುಖಂಡ ಎನ್.ಎಂ. ನವೀನ್ ಕುಮಾರ್, ಅರಿವು ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ ಕಶ್ಯಪ್ ,ಉದ್ಯಮಿ ಅಪೂರ್ವ ಸುರೇಶ್ ,ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಯೋಗೇಶ್ ನಾಯ್ಡು, ಸಿದ್ದೇಶ್, ವಿನಯ್ ಕಣಗಾಲ್ ,ರಾಜೇಶ, ಜೋಗಿ ಸುನೀಲ್,ಸುಚೀಂದ್ರ, ಚಕ್ರಪಾಣಿ ,ಈಶ್ವರ್ ಗೌಡ, ಯೋಗೀಶ್ ,ಹಾಗೂ ಇನ್ನಿತರರು ಹಾಜರಿದ್ದರು