
ರಾಯಚೂರು,ಜು.೨೯-
ತಾಲೂಕಿನ ಮಲಿಯಾಬಾದ್ ಗ್ರಾಮದಲ್ಲಿ ಹಸಿರಯೋಗಿ ಈರಣ್ಣ ಕೋಸಿಗಿ ನೇತೃತ್ವದಲ್ಲಿ ಮನೆ ಮನೆಗೆ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಇವರು ಮನೆ ಮನೆಗೆ ತೆರಳಿ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಿದರು. ಮಕ್ಕಳಿಗೆ ಗಿಡಗಳ ಮಹತ್ವದ ಕುರಿತು ತಿಳಿಸುತ್ತಾ ಅಳಿವಿನ ಅಂಚಿನಲ್ಲಿರುವ ಗಿಡಗಳನ್ನು ಉಳಿಸಿ ಬೆಳೆಸುವುದು ಅತೀ ಅವಶ್ಯವಾಗಿದೆ ನಾವು ಉಚಿತವಾಗಿ ಹಲವು ಜಾತಿಯ ಸಸಿಗಳನ್ನು ನೀಡುತ್ತೇವೆ ನೀವು ಆ ಸಸಿಗಳನ್ನು ಸಂರಕ್ಷಿಸಿ ಬೆಳೆಸಿದರೆ ಇನ್ನೂ ಹೆಚ್ಚಿನ ಸಸಿಗಳನ್ನು ಉಚಿತವಾಗಿ ನೀಡುತ್ತೇವೆ.
ಅತ್ತಿ, ಆಲ, ಅರಳೆ ಇನ್ನೂ ಮುಂತಾದ ಹಣ್ಣಿನ ಗಿಡಗಳನ್ನು ಬೆಳೆಸಿದರೆ ನಮಗೆ ಹಲವು ರೀತಿಯ ಉಪಯೋಗವಾಗುತ್ತದೆ ಹಾಗೂ ಹಕ್ಕಿಗಳಿಗೂ ಆಹಾರ ಸಿಗುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಚಂದ್ರಶೇಖರ್ ಹಾಗೂ ಗ್ರಾಮದ ಮಹಿಳೆಯರು ಮಕ್ಕಳು ಗ್ರಾಮಸ್ಥರು ಭಾಗವಹಿಸಿದ್ದರು.