ಮನೆ ಮನೆಗೆ ಶ್ರಾವಣ ವಿಶೇಷ ಕಾರ್ಯಕ್ರಮ

ಚಿತ್ರದುರ್ಗ.ಜು.೨೦ : ನಗರದ ಬಸವಕೇಂದ್ರ, ಶ್ರೀ ಜಗದ್ಗುರು ಮುರುಘರಾಜೇಂದ್ರ ಮಠದ ವತಿಯಿಂದ ಪ್ರತಿವರ್ಷದಂತೆ ಈ ವರ್ಷವು ಶ್ರಾವಣಮಾಸದ ನಿಮಿತ್ತ ನಿತ್ಯ ಕಲ್ಯಾಣ: ಮನೆ ಮನೆಗೆ ಶ್ರಾವಣ ವಿಶೇಷ ಕಾರ್ಯಕ್ರಮವನ್ನು ಡಾ. ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಜು. 29 ರಿಂದ 27 ರವರೆಗೆ ಪ್ರತಿನಿತ್ಯ ಚಿತ್ರದುರ್ಗ ನಗರ ಹಾಗು ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಹಮ್ಮಿಕೊಳ್ಳಲು ಶ್ರೀಮಠದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.ಎಸ್.ಜೆ.ಎಂ. ವಿದ್ಯಾಪೀಠದ ಜಂಟಿಕರ‍್ಯದರ್ಶಿ ಎ.ಜೆ. ಪರಮಶಿವಯ್ಯ, ಕೆಇಬಿ ಷಣ್ಮುಖಪ್ಪ, ಫಾದರ್ ರಾಜು, ನುಲೇನೂರು ಶಂಕ್ರಪ್ಪ, ಆರ್. ಮೂರ್ತಿ, ಎನ್.ಬಿ.ವಿಶ್ವನಾಥ್, ನಾಗರಾಜ ಸಂಗಂ, ಮಹೇಂದ್ರನಾಥ್, ಸ್ಪೀಚ್ ಸಂಸ್ಥೆ ಶೇಷಣ್ಣ ಮೊದಲಾದವರು ಸಭೆಯಲ್ಲಿ ಇದ್ದರು.