ಮನೆ ಮನೆಗೆ ಲಸಿಕೆ ಆಭಿಯಾನಕ್ಕೆ ಚಾಲನೆ ನೀಡಿದ ಶಾಸಕ ಯತ್ನಾಳ

ವಿಜಯಪುರ, ಏ.27-ನಗರ ಶಾಸಕರಾದ ಬಸನಗೌಡ ರಾ. ಪಾಟೀಲ್ ಯತ್ನಾಳರವರು ನಗರಾದ್ಯಂತ ಉಚಿತವಾಗಿ ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ಮನೆ ಮನೆಗೆ ಲಸಿಕೆ ಹಾಕುವ ಕಾರ್ಯಕ್ರಮದಡಿ, ಉಚಿತ ಲಸಿಕೆ ಆಭಿಯಾನವನ್ನು ನಗರಾದ್ಯಂತ ಉಚಿತವಾಗಿ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅದರಂತೆ ಇಂದು ವಾರ್ಡ ನಂ 4 ಆದರ್ಶನಗರದ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಉಚಿತ ಕೋವಿಡ್ ಲಸಿಕೆ ಆಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಶ್ರೀ ಸಿದ್ಧೇಶ್ವರ ಸಂಸ್ಥೆಯ, ಈಶ್ವರಗೌಡ ಪಾಟೀಲ್ ಯತ್ನಾಳ ಡಯಾಲಿಸೆಸ್ ಸೆಂಟರ್ ನಲ್ಲಿ 27 ಬೆಡ್‍ಗಳ, 7 ಐ.ಸಿ.ಯು, 25 ಆಕ್ಷಿಜನ್ ವ್ಯವಸ್ಥೆಯನ್ನು ಇದೇ ಗುರುವಾರದಿಂದ ಪ್ರಾರಂಭಿಸಲಾಗುವದು. ಕರೋನಾ ಲಸಿಕೆಯ ಬಗ್ಗೆ ಅನಗತ್ಯ ಭಯ ಬೇಡ, ನಾನು ಸಹ ಲಸಿಕೆ ಪಡೆದುಕೊಂಡಿದ್ದು ಇದರಿಂದ ಯಾವುದೇ ರೀತಿಯ ತೊಂದರೆಯಾಗಿಲ್ಲ, ಲಸಿಕೆ ಅತ್ಯಂತ ಸುರಕ್ಷಿತವಾಗಿದೆ. ನಗರದ ಎಲ್ಲ ಜನರು ಲಸಿಕೆ ಪಡೆದುಕೊಳ್ಳಿ ಇದರಿಂದ 100% ಲಸಿಕೆ ಹಾಕಿಸಿಕೊಂಡ ನಗರವಾಗಿ ಮಾಡುವಂತಹ ಕನಸಿದೆ ವಿಜಯಪುರ ನಗರವನ್ನು ಕರೋನಾ ಮೂಕ್ತವಾಗಿ ಮಾಡಿ, ಮಾಸ್ಕ ರಹಿತ ನಗರವನ್ನಾಗಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದರು.
ನಗರದಲ್ಲಿ ಕೋವಿಡ್ ಲಸಿಕಾ ಅಭಿಯಾನವನ್ನು ಪ್ರಾರಂಭ ಮಾಡಿದಾಗಿನಿಂದ ನಗರವು ಈಗಾಗಲೇ ಶೇ 42% ರಷ್ಟು ಗುರಿಯನ್ನು ಸಾಧಿಸಿದ್ದು, ಜಿಲ್ಲೆಯ ಒಟ್ಟಾರೆ ಪ್ರತಿಶತ ಶೇಕಡಾದಲ್ಲಿ ನಗರವು ಮುಂದಿದೆ. ನಗರದಾದ್ಯಂತ ವ್ಯಾಕ್ಷಿನೇಶನ್ ನಡೆಯುತ್ತಿದ್ದು ಈಗಾಗಲೇ ನಮ್ಮ ಸಿದ್ಧೇಶ್ವರ ಸಂಸ್ಥೆಯ ಹಾಗು ಸಿದ್ದಸಿರಿ ಸೌಹಾರ್ಧ ಸಹಕಾರಿ ನಿ. ಸಹಭಾಗಿತ್ವದಡಿಯಲ್ಲಿ ಶ್ರೀ ಸಿದ್ದೇಶ್ವರ ಸಂಸ್ಥೆಯ ನಗರದ ಮನಗೂಳಿ ರಸ್ತೆಯಲ್ಲಿ ಬರುವ ಬಸವ ಭವನ ಮಂಗಲ ಕಾರ್ಯಾಲವನ್ನು ಕೋವಿಡ್ ಕೇರ್ ಸೆಂಟರ್‍ಗಾಗಿ ನೀಡಿದ್ದು, ಇಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಬಿಸಲಾಗಿದೆ, ಇಲ್ಲಿ ಆರೋಗ್ಯ ಸಿಬ್ಬಂದಿಗಳು ಇರುತ್ತಾರೆ, ಅಲ್ಲದೆ ನಮ್ಮ ಸಿದ್ದೇಶ್ವರ ಸಂಸ್ಥೆ ಹಾಗು ಸಿದ್ದಸಿರಿ ಸೌಹಾರ್ಧದಿಂದ ರೋಗಿಗಳಿಗಾಗಿ ಉಚಿತವಾಗಿ ಬೆಳಿಗ್ಗೆ ಉಪಹಾರ ಹಾಗು ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಬೆಡ್ ವ್ಯವಸ್ಥೆಯನ್ನು ಬಸವ ಭವನದಲಿ ್ಲ ಕಲ್ಪಿಸಲಾಗಿದೆ.
ಸಿದ್ಧೇಶ್ವರ ಸಂಸ್ಥೆಯ ವತಿಯಿಂದ ಶಾಲಾ ಬಸ್ಸಗಳನ್ನು ನಗರ ನಾಗರಿಕರಿಗಾಗಿ ಲಸಿಕಾ ಕೇಂದ್ರಗಳಿಗಾಗಿ ಕರೆತರಲು ನೀಡಲಾಗಿದೆ, ಅದಲ್ಲದೆ ಉಚಿತ ಲಸಿಕಾ ಕೇಂದ್ರದ ಬಗ್ಗೆ ಮಾಹಿತಿ ನೀಡಲು ಅಟೋ ಪ್ರಚಾರದ ವ್ಯವಸ್ಥೆ ಸಹ ಮಾಡಿದ್ದು ನಮ್ಮ ಸಂಸ್ಥೆಯ ಹಾಗು ಸೌಹಾರ್ದದ ಸಿಬ್ಬಂದಿಗಳು ಮನೆ-ಮನೆಗೆ ಹೋಗಿ ಲಸಿಕಾ ಕೇಂದ್ರದಲ್ಲಿ ನಾಗರಿಕರು ಬಂದು ಲಸಿಕೆ ಪಡೆಯಲು ಮಾಹಿತಿ ನೀಡುತ್ತಿದ್ದಾರೆ.
ವಿಜಯಪುರ ನಗರ ಮತಕ್ಷೇತ್ರವು ನೂರಕ್ಕೆ ನೂರರಷ್ಟು (100%) ಲಸಿಕಾ ಗುರಿ ಸಾಧಿಸುವನಿಟ್ಟಿನಲ್ಲಿ ಪರಿಕಲ್ಪನೆಯೊಂದಿಗೆ, ಸತತವಾಗಿ ಉಚಿತ ಲಸಿಕಾ ಅಭಿಯಾನವನ್ನು ದಿ.27-04 ರಂದು ಬೆಳಿಗ್ಗೆ 10:30 ಕ್ಕೆ ವಾರ್ಡ ನಂ-04, ಸೋಲಾಪುರ ರಸ್ತೆಯ ಕೆ.ಎಚ್.ಬಿ. ಕಾಲೊನಿ ಶ್ರೀ ಹನುಮಾನಗುಡಿ ಆವರಣ, ದಿ.28-04 ರಂದು ಬೆಳಿಗ್ಗೆ 10:30 ಕ್ಕೆ ವಾರ್ಡನಂ-01 ರ ಸಂಗಮೇಶ್ವರ ಕಾಲೊನಿಯ ಶ್ರೀ ಸಂಗಮೇಶ್ವರಗುಡಿ ಆವರಣ. ದಿ.29-04 ರಂದು ಬೆಳಿಗ್ಗೆ 10:30 ಕ್ಕೆ ವಾರ್ಡ ನಂ-22 ರಜಲನಗರದ ಶ್ರೀ ಶಿವಶರಣೆ ನಿಂಬೆಕ್ಕ ಸಭಾಭವನ (ಶ್ರೀ ಸಿದ್ದೇಶ್ವರ ಬ್ಯಾಂಕ್ ಹತ್ತಿರ) ಹಾಗೂ ದಿ.30-04 ರಂದು ಬೆಳಿಗ್ಗೆ 10:30 ಕ್ಕೆ ವಾರ್ಡನಂ-03 ರ ಗ್ಯಾಂಗಬಾವಡಿಯ ಕುಂಬಾರಗಲ್ಲಿಯ ಸರಕಾರಿ ಶಾಲೆ ನಂ-10 ರಲ್ಲಿ ಏರ್ಪಡಿಸಲಾಗಿದ್ದು ಸುತ್ತಮುತ್ತಲಿನ ನಾಗರಿಕರು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಆರೋಗ್ಯ ಅಧಿಕಾರಿಗಳಾದ ಡಾ.ಕವಿತಾ ದೊಡ್ಡಮನಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಪಾಲಿಕೆ ಮಾಜಿ ಸದಸ್ಯರಾದ ಎಂ.ಎಸ್.ಕರಡಿ, ಮುಖಂಡರಾದ ಚಂದ್ರು ಚೌಧರಿ, ಶ್ರೀನಿವಾಸ ಬೆಟಗೇರಿ, ರಾಜಶೇಖರ ಭಜಂತ್ರಿ, ಪ್ರಮೋದ ಕುಲಕರ್ಣಿ, ಪ್ರಕಾಶ ಚವ್ಹಾಣ, ನಾಗರಾಜ ಮುಳವಾಡ, ರಾಜುಗೌಡ ಪಾಟೀಲ್, ಮಿಲಿಂದ್ ಚಿಂಚಲಕರ ಸೇರಿದಂತೆ ಆರೋಗ್ಯ ಇಲಾಖೆ ಹಾಗೂ ಶ್ರೀ ಸಿದ್ಧೇಶ್ವರ ಸಂಸ್ಥೆ, ಸಿದ್ಧಸಿರಿ ಸೌಹಾರ್ದ ಸಹಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.