ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದ ಕವಿತಾ ನಾಗಭೂಷಣ

ಬಳ್ಳಾರಿ, ಏ.18: ನಡೆಯುತ್ತಿರುವ ಇಲ್ಲಿನ‌ ಪಾಲಿಕೆಯ ಚುನಾವಣೆಯಲ್ಲಿ 15 ನೇ ವಾರ್ಡಿನಿಂದ ಸ್ಪರ್ಧೆ ‌ಮಾಡಿರುವ ಬಿಜೆಪಿ ಅಭ್ಯರ್ಥಿ ಕವಿತಾ ನಾಗಭೂಷಣ ಅವರು ಇಂದು ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ನಗರದ ಅಭಿವೃದ್ಧಿ ಗೆ ಈ ಹಿಂದಿನಂತೆ ಸೇವೆ ಮಾಡಲು ತಮಗೆ ಅವಕಾಶ ಕಲ್ಪಿಸಿ ಎಂದು ಅಭ್ಯರ್ಥಿ ಕೋರಿದರು.
ವಾರ್ಡು ವ್ಯಾಪ್ತಿಯ ಸಿಂದಗಿ ಕಾಂಪೌಂಡಿನಲ್ಲಿ ಕವಿತಾ ಮತ್ತು ಪತಿ ನಾಗಭೂಷಣ ಅವರು ಮತದಾರರಲ್ಲಿ ತಮಗೆ ಮತ ನೀಡುವಂತೆ ಕರ ಪತ್ರನೀಡಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ 15 ವಾರ್ಡಿನ ಬಿಜೆಪಿ ಪಕ್ಷದ ಮಾಧ್ಯಮ ಸಂಚಾಲಕರು ಹಾಗೂ ವಾರ್ಡಿನ ಮುಖಂಡರಾದ ರಾಜೀವ್ ಸಿಂದಗಿ. ಮಾಲಾ ರಾಜೀವ್, ಸಂದ್ಯಾ, ಅಶೋಕ್, ಗೋಪಾಲ್. ಬದ್ರಿ. ಕಾಂತರಾಜ್. ರವೀಂದ್ರ ರೆಡ್ಡಿ. ತಮಣ್ಣ ಹಾಗೂ ಇತರರು ಉಪಸ್ಥಿತರಿದ್ದರು