
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.13: ಜೆಡಿಎಸ್ ಪಕ್ಷದ ನಗರ ಅಭ್ಯರ್ಥಿ ಮುನ್ನಾಭಾಯ್ ಇಂದು ನಗರದ 18ನೇ ವಾರ್ಡ್ ನ ಬಿಸಲಹಳ್ಳಿಯಿಂದ ಮನೆ ಮನೆಗೆ ಕುಮಾರಣ್ಣನ ಪಂಚರತ್ನ ಯೋಜನೆಯ ಬಗ್ಗೆ ತಿಳಿಸುತ್ತ ಚುನಾವಣೆಯ ಪ್ರಚಾರ ಶುರು ಮಾಡಿದ್ದಾರೆ.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಳ್ಳಿ ತಾಯಣ್ಣ. ಜಿಲ್ಲಾಧ್ಯಕ್ಷಾ ಪಿ.ಎಸ್. ಸೋಮಲಿಂಗನಗೌಡ ಮೊದಲಾದವರೊಂದಿಗೆ ತೆರಳಿ ಕರಪತ್ರ ನೀಡಿ ಬಡಜನರಿಗಾಗಿ ಇರುವ ಜೆಡಿಎಸ್ ಗೆ ಮತ ನೀಡಿ ಎಂದು ಮನವಿ ಮಾಡಿದರು.