ಮನೆ-ಮನೆಗೆ ತೆರಳಿ ಲಸಿಕೆ ಹಾಕಿಸಿ: ಪ್ರಿಯಾಂಕ್

ವಾಡಿ:ಎ.27: 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಕೋವಿಡ್ ಲಸಿಕೆ ಪಡೆಯಬೇಕು. ಯಾವುದೇ ಊಹಾ-ಪೋಹಾಗಳಿಗೆ ಕಿವಿಗೊಡದೆ ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳುವಂತೆ ಭೂತ ಮಟ್ಟದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಹಾಗೂ ಚುನಾಯಿತ ಪ್ರತಿನಿಧಿಗಳು ಕೆಲಸ ನಿರ್ವಹಿಸಬೇಕೆಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

ಪಟ್ಟಣದ ಆಲ್ ಅಮೀನ್ ಉರ್ದು ಶಾಲೆ ಆವರಣದಲ್ಲಿ ಕೊರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ, ಪುರಸಭೆ ಸದಸ್ಯರು, ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಪ್ರತಿಯೊಬ್ಬರು ವ್ಯಾಕ್ಸಿನ್ ಪಡೆಯುವ ನಿಟ್ಟಿನಲ್ಲಿ ಮನೆ-ಮನೆಗೆ ತೆರಳಿ, ಕರೆದುಕೊಂಡು ಬಂದು ಲಸಿಕೆ ಪಡೆಯುವಲ್ಲಿ ಪ್ರೇರೆಪಿಸಬೇಕು. ಈಗಾಗಲೇ ತಾಲ್ಲೂಕಿನಾದ್ಯಾಂತ ಬೇಡ್ ಕೊರತೆಯಿಲ್ಲ. ಕೋವಿಡ್ ಸೆಂಟರ್ ತೆರೆದು ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಸಂಸದ ಉಮೇಶ ಜಾಧವ ಜೀಮ್ಸ್ ಆಸ್ಪತ್ರೆಗೆ ಭೇಟಿ ನೀಡುವ ಬದಲು ಚಿತ್ತಾಪೂರ ಕ್ಷೇತ್ರಕ್ಕೆ ಬರುತ್ತಾರೆ. ಏಕೆಂದರೆ ಇಲ್ಲಿ ಇಲ್ಲಾ ಸೌಲಭ್ಯವಿದೆ. ಜೀಮ್ಸ್ ಆಸ್ಪತ್ರೆಗೆ ಭೇಟಿ ನೀಡಿದರೇ ಜನ ಚಪ್ಪಲ್ಲಿ ತಗೊಂಡು ಹೊಡೆಯುತ್ತಾರೆ ಎಂದು ಆಕ್ರೋಶ ಭರಿತರಾಗಿ ಹೇಳಿ, ಪಕ್ಕದಲ್ಲೇ ಇದ್ದ, ಪುರಸಭೆ ವಿರೋಧ ಪಕ್ಷದ ನಾಯಕ ಭೀಮಶಾ ಜೀರೊಳ್ಳಿಗೆ ತಾವೂ ತಪ್ಪು ತಿಳಿಯಬಾರದು ಎಂದು ಹೇಳಿದರು.

ಕೊರೊನಾ ಮೊದಲನೇ ಅಲೇ ಇದ್ದಾಗ ಕಲಬುರಗಿ ಜಿಲ್ಲೆಯ ಕುರಿತು ತಜ್ಞರು ನೀಡಿದ ಸಮಿತಿಯ ವರದಿ ಎಲ್ಲಿ ಹೋಯಿತ್ತು! ಪಿಎಮ್ ಕೇರ್ ಫಂಡ್‍ನಿಂದ ಏಕೆ ಹಣ ತರುತ್ತಿಲ್ಲ. ಜಿಲ್ಲೆಯಲ್ಲಿ ಲಸಿಕೆಯಿಲ್ಲ ಎಂದು ಭೀಕ್ಷೆ ಬೇಡುವ ಪರಿಸ್ಥಿತಿ ನಿರ್ಮಿಸಿದ್ದಾರೆ ಎಂದು ಸಂಸದ ಉಮೇಶ ಜಾಧವ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಕೊರೊನಾ ತಡೆಯುವ ನಿಟ್ಟಿನಲ್ಲಿ ರಾಜಕೀಯ ಮಾಡಬಾರದು ಎಂದು ಹೇಳುವ ಬಿಜೆಪಿಗರು, ಜಿಲ್ಲೆಯ ಶಾಸಕರನ್ನು, ಅನುಭವಿ ರಾಜಕೀಯ ಧುರೀಣರನ್ನು ಕರೆದು ಎಂದಾದರು ಸಭೆ ಮಾಡಿದ್ದಿರಾ! ಇದು ನಿಮ್ಮ ರಾಜಕೀಯ ಅಲ್ಲವೇ ಎಂದು ಬಿಜೆಪಿ ನಾಯಕರನ್ನು ಕಠೋರವಾಗಿ ಪ್ರಶ್ನಿಸಿದರು. ಜಿಲ್ಲೆಯಲ್ಲಿ ಅಕ್ರಮ ದಂಧೆಗಳನ್ನು ನಡೆಸಿ ಯುವಕರ ಭವಿಷ್ಯವನ್ನು ಹಾಳು ಮಾಡುವುದೇ ಬಿಜೆಪಿಯ ಅಭಿವೃದ್ಧಿ ಎಂದು ಕೀಡಿಕಾರಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಉಮಾಕಾಂತ ಹಳ್ಳೇ, ಮುಖ್ಯಾಧಿಕಾರಿ ವಿಠ್ಠಲ್ ಹಾದಿಮನಿ, ಪಿಎಸ್‍ಐ ವಿಜಯಕುಮಾರ್ ಬಾವಗಿ, ಹಿರಿಯ ಕಾಂಗ್ರೇಸ್ ಮುಖಂಡ ಟೋಪಣ್ಣ ಕೋಮಟೆ, ಶಂಕ್ರಯ್ಯಾ ಸ್ವಾಮಿ ಮದ್ರಿ, ವಿಶೇಷ ಪೇದೆ ದೊಡ್ಡಪ್ಪ ಪೂಜಾರಿ, ದತ್ತು ಜಾನೆ ಸೇರಿದಂತೆ ಕಾಂಗ್ರೇಸ್ ಕಾರ್ಯಕರ್ತರು, ಅಭಿಮಾನಿಗಳು ಇದ್ದರು.


ಸಂಸದ ಉಮೇಶ ಜಾಧವ ಅವರು ಜಿಲ್ಲೆಯಲ್ಲಿ ಬೇಡ್, ಆಕ್ಸಿಜನ್ ಕೊರತೆ ಇಲ್ಲವೆಂದು ನನಗೆ ಹೇಳುವ ಅವಶ್ಯಕತೆಯಿಲ್ಲ. ಜೀಮ್ಸ್ ಆಸ್ಪತ್ರೆಗೆ ತೆರಳಿ ಜನರಿಗೆ ಹೇಳಲಿ. ಸುಳ್ಳು ಹೇಳುವ ಬದಲು ಶ್ವೇತಪತ್ರ ಹೋರಡಿಸಲಿ.

ಪ್ರಿಯಾಂಕ್ ಖರ್ಗೆ ಚಿತ್ತಾಪೂರ ಶಾಸಕರು.


ತಾಲ್ಲೂಕಿನಲ್ಲಿ ಕೋವಿಡ್ ವ್ಯಾಕ್ಸಿನ್ ನೀಡಲಾಗುತ್ತಿದೆ. ಈಗಾಗಲೇ 2792 ವ್ಯಾಕ್ಸೀನ್ ನೀಡಲಾಗಿದೆ. ವಿಶ್ವಾಸದಿಂದ ಲಸಿಕೆ ಪಡೆಯಲು ಜನರು ಮುಂದಾಗಬೇಕು.

ಡಾ.ದೀಪಕ್ ಪಾಟೀಲ್ ತಾಲ್ಲೂಕು ವೈಧ್ಯಾಧಿಕಾರಿ ಚಿತ್ತಾಪೂರ.