ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತಯಾಚನೆ

ಅರಕೇರಾ,ಮೇ.೦೮- ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ದೇವದುರ್ಗ ವಿಧಾನಸಭಾ ಕ್ಷೇತ್ರಾದ ಬಿಜೆಪಿ ಪಕ್ಷದ ಅಭ್ಯರ್ಥಿ ಕೆ.ಶಿವನಗೌಡನಾಯಕರವರ ಪರವಾಗಿ ಬಿಜೆಪಿ ಯುವ ಮುಖಂಡ ಹಾಘೂ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರಾದ ವಿರೇಶನಾಯಕ ಅವರು ಮಲ್ಲೇವರಗುಡ್ಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿಬರುವ ಎಲ್ಲಾ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಕೆ,ಶಿವನಗೌಡನಾಯಕ ಪರವಾಗಿ ಪ್ರತಿ ಗ್ರಾಮದಲ್ಲಿನ ಮತದಾರ ಬಳಿಹೋಗಿ ಮತಯಾಚನೆಮಾಡಿದರು.
ಮನೆ ಮನೆಗೂ ತೆರಳಿ ಮತದಾರರಿಗೆ ಬಿಜೆಪಿ ಮೇಲೇ ಒಲವು ಬರುವಂತೆ ಜನರಿಗೆ ಸರಕಾರದ ಯೋಜನೆಗಳ ಬಗ್ಗೆ ಹಾಗೂ ದೇಶದ ಸಾರ್ವಾಂಗಿಗಳ ವಿಕಾಸಕ್ಕಾಗಿ ನರೇಂದ್ರಮೋದಿ ಅವರು ಹಗಲು ರಾತ್ರಿ ಎನ್ನದೇ ಕೆಲಸಮಾಡುತ್ತಿದ್ದಾರೆ.
ಅದೇ ರೀತಿ ದೇವದುರ್ಗ ಮತಕ್ಷೇತ್ರದ ಅಭ್ಯರ್ಥಿ ಕೆ,ಶಿವನಗೌಡನಾಯಕರು ಕೂಡಾ ಕ್ಷೇತ್ರದಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುವ ಜೊತೆಯಲ್ಲಿ ಜನರಲ್ಲಿ ನಿರಂತರ ಸಂಪರ್ಕದಲ್ಲಿದ್ದು ಒಳ್ಳೆಯ ಕಾರ್ಯಗಳಿಂದ ಅವರು ಜನರ ಮನಸ್ಸಿನಲ್ಲಿದ್ದಾರೆ.ಅವರು ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳನ್ನು ಮತದಾರರಿಗೆ ತಿಳಿಸುವ ಮೂಲಕ ಮೇ ೧೦ರಂದು ನಡೆಯುವ ಚುನಾವಣೆಯಲ್ಲಿ ಮತ್ತೋಮ್ಮೆ ಬಿಜೆಪಿ ಪಕ್ಷದ ಅಭ್ಯರ್ಥಿ ಕೆ,ಶಿವನಗೌಡನಾಯಕರನ್ನು ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಕ್ಷೇತ್ರದ ಅಭಿವೃದ್ದಿಗೆ ಸಹಕಾರ ನೀಡಬೇಕು ಎಂದು ಮತದಾರರಿಗೆ ಮನವಿಮಾಡಿಕೊಂಡರು ಪ್ರತಿ ಗ್ರಾಮಕ್ಕೆ ಬಿಜೆಪಿ ಪಕ್ಷದ ಮುಖಂಡರು ಹಾಗೂ ನೂರಾರು ಯುವಕರು ,ಕಾರ್ಯಕರ್ತರ ಜೊತೆಯಲ್ಲಿ ಬೈಕ್ ರಾಲಿ ಮೂಲಕ ಮತಯಾಚನೆ ಮಾಡಿದರು.