ಮನೆ ಮನೆಗೆ ತೆರಳಿ ಪಂಚಾಂಗ ಅಭಿಯಾನ

ಮೈಸೂರು:ಏ:10: ಮನೆ ಮನೆಗೆ ಒಂಟಿಕೊಪ್ಪಲ್ ಪಂಚಾಂಗ ಅಭಿಯಾನಕ್ಕೆ ನಗರದ ರಾಮಾನುಜ ರಸ್ತೆಯಲ್ಲಿರುವ ರಾಜಾರಾಮ್ ಅಗ್ರಹಾರ ದಿಂದ ಮೈಸೂರು ಬ್ರಾಹ್ಮಣ ಯುವ ವೇದಿಕೆಯ ಅಧ್ಯಕ್ಷ ರಾದ ಡಿಟಿ. ಪ್ರಕಾಶ್ ರವರು ಚಾಲನೆ ನೀಡಿದರು.
ನಗರದ ರಾಮಾನುಜ ರಸ್ತೆಯಲ್ಲಿರುವ ರಾಜಾರಾಮ್ ಅಗ್ರಹಾರ ಬಡಾವಣೆಗಳ 200ಮನೆಗಳಿಗೂ ಹೆಚ್ಚು ಪಂಚಾಂಗವನ್ನು ಬ್ರಾಹ್ಮಣ ಯುವ ವೇದಿಕೆಯ ಕಾರ್ಯಕರ್ತರು ನೀಡಿ ಹಿಂದೂ ಧಾರ್ಮಿಕ ಹಬ್ಬಗಳ ಆಚರಣೆಯನ್ನು ಪಾಲಿಸುವಂತೆ ಜಾಗೃತಿ ಮೂಡಿಸಿದರು.
ನಂತರ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ರವರು ಮಾತನಾಡಿ ಸೌರಮಂ ಡಲದ ಆಧಾರಿತದ ಮೇಲೆ ಭೂಮಿಯಲ್ಲಿ ನಡೆಯುವ ಬದಲಾವಣೆಯನ್ನು ತಿಳಿಸುವುದೇ ಪಂಚಾಂಗ, ಯುಗಾದಿ ವರ್ಷಾಚರಣೆ ಬೇವುಬೆಲ್ಲವು ಕಹಿಸಿಹಿಯ ಸಂಕೇತ ಕಷ್ಟ ಸುಖಗಳ ಸಮಬಾಳಿನ ಜೀವನವನ್ನು ಸರಿ ಯಾದ ಸಂಧರ್ಭದಲ್ಲಿ ನಡೆಸಬೇಕಾದರೆ ಪಾಂಚಾಂಗದ ನಿರ್ಧಾರ ಮುಖ್ಯವಾಗುತ್ತದೆ, ಸಂವತ್ಸರ ಮಾಸ, ತಿಥಿ ನಕ್ಷತ್ರ ರಾಶಿಯ ಕಾಲದ ಘಳಿಗೆಯ ಮಾಹಿತಿ ಮೊದಲು ತಿಳಿದುಕೊಳ್ಳಬಹುದು, ಭಾರತದ ಇತಿಹಾಸದ ಕೆಲವು ವಿಷಯಗಳು ಪಂಚಾಂಗದಲ್ಲಿ ಮಾಹಿತಿ ನೀಡುತ್ತದೆ ಎಂದರು
ನಂತರ ಕಾಂಗ್ರೆಸ್ ಯುವ ಮುಖಂಡ ಎನ್. ಎಮ್ ನವೀನ್ ಕುಮಾರ್ ಮಾತನಾಡಿ ಒಂಟಿ ಕೊಪ್ಪಲ್ ಪಂಚಾಂಗವೂ ದೇಶವಿದೇಶಗಳಲ್ಲಿ ಜನ ಪ್ರಿಯವಾಗಿರುವುದು ಮೈಸೂರಿನ ಹಿರಿಮೆಯನ್ನು ಹೆಚ್ಚಿಸಿದೆ, ಧಾರ್ಮಿಕ ಸಂಪ್ರಾದಯವನ್ನು ಪರಿಪಾಲಿಸುವವರು ಪಂಚಾಂಗದ ಮಾಹಿತಿಯನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದರು,
ನಂತರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾದ ಕೆ. ರಘುರಾಂ ವಾಜಪೇಯಿ ಮಾತನಾಡಿ, ಸಮಾಜದಲ್ಲಿ ಯಾವುದೇ ಶುಭಕಾರ್ಯಗಳ ದಿನಾಂಕಗಳು ನಿಗಧಿಯಾಗುವುದೇ ಪಂಚಾಂಗದ ಆಧಾರಿತದ ಮೇಲೆ, ಇಂದ್ರಾಗ್ನಿವರುಣನ ಕಾಲ ಅಂದರೆ ಮಳೆಬೇಸಿಗೆ ಚಳಿಗಾಲದ ಸ್ಥಿತಿಗತಿಯ ಸೂಕ್ಷ್ಮ ಮೊದಲೇ ತಿಳಿಯುವ ಶಕ್ತಿ ಪಂಚಾಂಗಕ್ಕಿದೆ ಎಂದರೆ ಪೂರ್ವಿಕರ ಪುಣ್ಯ, ಪ್ರತಿಯೊಬ್ಬ ಹಿಂದೂಗಳು ಮನೆಯಲ್ಲಿ ಪಂಚಾಂಗ ಓದಲು ಮುಂದಾದರೆ ನಮ್ಮ ಹಿಂದೂ ಸನಾತನ ಧರ್ಮ ಬೆಳೆಯುತ್ತದೆ, ಧಾರ್ಮಿಕ ಆಧ್ಯಾತ್ಮ ಕ್ಷೇತ್ರವಲ್ಲದೇ ಶುಭಸಮಾ ರಂಭದ ಘಳಿಗೆ ಮುಹೂರ್ತ ತಿಳಿಸುವ ಒಂಟಿಕೊಪ್ಪಲ್ ಪಂಚಾಂಗ ನೂರಾರು ವರ್ಷಗಳಿಂದ ಶ್ರಮಿಸುತ್ತಿರುವ ರಾಮಕೃಷ್ಣ ಶಾಸ್ತ್ರಿ ಹಾದಿಯಾಗಿ ಅವರ ಪುತ್ರ ಕುಮಾರ್ ಶಾಸ್ತ್ರಿ ರವರ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲು ರಾಜ್ಯ ಸರ್ಕಾರ ಮುಂದಾಗಬೇಕಿದೆ ಎಂದರು.
ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ರಾದ ಡಿ ಟಿ ಪ್ರಕಾಶ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ರಾಜ್ಯ ಉಪಾಧ್ಯಕ್ಷರಾದ ಕೆ ರಘುರಾಂ ವಾಜಪೇಯಿ, ನಗರ ಪಾಲಿಕಾ ಸದಸ್ಯರಾದ ಮಾ ವಿ ರಾಮ್ ಪ್ರಸಾದ್, ಎಂ ಸಿ ರಮೇಶ್ ,ಕಾಂಗ್ರೆಸ್ ಯುವ ಮುಖಂಡರಾದ ಎನ್ ಎಂ ನವೀನ್ ಕುಮಾರ್, ಕರ್ನಾಟಕ ಸರ್ಕಾರದ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರಾದ ಎಂ ಆರ್ ಬಾಲಕೃಷ್ಣ, ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ವಿನಯ್ ಕಣಗಾಲ್, ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಚ್ ವಿ ಭಾಸ್ಕರ್, ಅಪೂರ್ವ ಸುರೇಶ್, ಸುಚೇಂದ್ರ, ಧಾರ್ಮಿಕ ಮುಖಂಡರಾದ ಪ್ರಹ್ಲಾದ್ ರಾವ್, ರಂಗನಾಥ್, ಶ್ರೀನಿವಾಸ್ ಪ್ರಸಾದ್, ಅಮೋಘ ನಾಗರಾಜ್ ಹಾಗೂ ಇನ್ನಿತರರು ಹಾಜರಿದ್ದರು.