ಮನೆ-ಮನೆಗೆ ತೆರಳಿ ಕಾಂಗ್ರೆಸ್ ಸಾಧನೆ ಪ್ರಚಾರಕ್ಕೆ ಸಿದ್ದತೆ

ಕಾಂಗ್ರೆಸ್ ಗೆಲುವಿಗೆ ಕಾರ್ಯಕರ್ತರ ಶ್ರಮ ಅಗತ್ಯ – ಶ್ರೀದೇವಿ ಆರ್ ನಾಯಕ
ಅರಕೇರಾ.ನ.೧೦- ಬಿಜೆಪಿ ರಾಜ್ಯ ಹಾಗೂ ದೇಶದಲ್ಲಿ ಕೊಳ್ಳೆ ಹೊಡೆಯುವ ಮೂಲಕ ದೇಶದ ಜನಸಾಮಾನ್ಯರಿಗೆ ವಂಚನೆ ಮಾಡುತ್ತಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಶ್ರೀದೇವಿ ರಾಜಶೇಖರ ನಾಯಕ ಆರೋಪಿಸಿದರು.
ಸಮೀಪದ ನಾಗಡದಿನ್ನಿ ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ಕಾಂಗ್ರೆಸ್ ನಡಿಗೆ ಹಳ್ಳಿ ಕಡೆಗೆ ಪೂರ್ವಭಾವಿ ಸಭೆ ಹಾಗೂ ವಿವಿಧ ಪಕ್ಷದ ಮುಖಂಡರು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕರೋನಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳು ಬಡವರ ಕೈಹಿಡಿದವು. ಅನ್ನ ಭಾಗ್ಯ ಮತ್ತು ಕ್ಷೀರ ಭಾಗ್ಯ ಯೋಜನೆಗಳು ಇಂದಿಗೂ ಜನಮಾನಸವಾಗಿ ಉಳಿದಿವೆ. ತಾಲೂಕಿನ ಪ್ರತಿ ಮನೆಗಳಿಗೆ ತೆರಳಿ ಅವರ ಮನಸ್ಸುಗಳಿಗೆ ಕಾಂಗ್ರೆಸ್ ಸಾಧನೆ ಮುಟ್ಟಿಸಿ, ಎಲ್ಲಾ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದಕ್ಕೆ ಪ್ರತಿಯೊಬ್ಬ ಕಾರ್ಯಕರ್ತರು ಶ್ರಮೀಸಬೇಕಿದೆ. ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋದವರೆಲ್ಲ ಮರಳಿ ಪಕ್ಷಕ್ಕೆ ಸೇರಲಿದ್ದಾರೆ ಎಂದರು.
ಎಪಿಎಂಸಿ ತಾಲೂಕು ಮಾಜಿ ಅಧ್ಯಕ್ಷ ಭೀಮನಗೌಡ ನಾಗಡದಿನ್ನಿ ಮಾತನಾಡಿ, ಕಾಂಗ್ರೆಸ್ ತನ್ನದೇ ಆದ ಇತಿಹಾಸವನ್ನು ಹೊಂದಿದೆ, ದೇಶದಲ್ಲಿ ಬಿಜೆಪಿ ಕೋಮು ಗಲಭೆಗಳನ್ನು ಸೃಷ್ಠಿಸುತ್ತದೆ. ಜಾತಿ ಹಾಗೂ ಧರ್ಮದ ಹೆಸರಲ್ಲಿ ಬಿಜೆಪಿ ದುರಾಡಳಿತ ಮಾಡುತ್ತಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಬಡವರ ಸೇವೆಗೆ ಅವಕಾಶ ಕಲ್ಪಿಸಬೇಕು ಎಂದರು.
ಈ ಸಂದರ್ಭದಲ್ಲಿ ಬಸವರಾಜ ಸ್ವಾಮಿ, ಬಸವರಾಜಯ್ಯ ಸ್ವಾಮಿ ಹಿರೇಮಠ, ಭೀಮನಗೌಡ ನಾಗಡದಿನ್ನಿ, ಶಿವರುದ್ರಗೌಡ, ಮಾಜಿ ತಾಪಂ ಸದಸ್ಯ ಕೆ.ಉಮೇಶ ಗೌಡ ಪೋ.ಪಾ, ರಾಚಪ್ಪ ನಾಯಕ, ಅರಕೇರಾ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕ ಅಧ್ಯಕ್ಷೆ ಶ್ರೀದೇವಿ ಎಸ್ ನಾಯಕ, ಅಮರಪ್ಪ ನಾಯಕ, ಕೆ.ಮಲ್ಲಪ್ಪ ನಾಯಕ ಯರಮರಸ್, ತಿಮ್ಮಾರೆಡ್ಡಿ ನೀಲಗಲ್, ಬುಡಾನ್ ಸಾಬ ಹೆಗ್ಗಡದಿನ್ನಿ, ಶಿವಲಿಂಗಪ್ಪ ಗೌಡ ನೀಲಗಲ್, ಮಹೇಶ ಸ್ವಾಮಿ ಜಾಗಟಗಲ್, ಮಲ್ಲು ಮೇಟಿ, ಕೃಷ್ಣ ನಾಯಕ ತಿಪ್ಪಲದಿನ್ನಿ, ಬಸವರಾಜ ದೊರೆ ಮರಕಂದಿನ್ನಿ, ರಾಜಶೇಖರ ಗೌಡ ಗೆಜ್ಜೆಭಾವಿ, ರಂಗಪ್ಪ, ಸೋಮಶೇಖರ, ಬಾಲಪ್ಪ ನಾಯಕ, ಹನುಮಂತ ಕುರುಬರು, ಸಣ್ಣ ಈರನಗೌಡ, ಬೆಂಗ್ಳೂರು ಬಸವರಾಜ, ಕೆ.ಹಾಜಿ ಬಾಬು, ಸಿದ್ದಯ್ಯಸ್ವಾಮಿ, ಅಮರಯ್ಯ ಸ್ವಾಮಿ, ರಾಚೋಟೆಯ್ಯ ಸ್ವಾಮಿ, ಡೊಳ್ಳೆ ಭೀಮಪ್ಪ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.