
ರಾಯಚೂರು,ಮಾ.೧೪- ಮಾಜಿ ನಗರ ಸಭೆ ಸದಸ್ಯರಾದ ಕೆ.ಈ ಕುಮಾರ್‌ರವರ ನೇತೃತ್ವದಲ್ಲಿ ಇಂದು ರಾಯಚೂರು ನಗರದ ಬಡವಣೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಮನೆ ಮನೆಗೆ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಲಾಯಿತು.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ಬಂದರೆ, ಪ್ರತಿ ಕುಟುಂಬಕ್ಕೆ ೨೦೦೦ ರೂಪಾಯಿಗಳು, ಹಾಗೂ ಪ್ರತಿ ಕುಟುಂಬದ ಒಬ್ಬ ಸದಸ್ಯರಿಗೆ ೧೦ ಕೆಜಿ ಅಕ್ಕಿ ನೀಡುವ ಹಾಗೂ ೨೦೦ ಯೂನಿಟ್ ಕರೆಂಟ್ ಬಿಲ್ಲನ್ನು ಉಚಿತವಾಗಿ ನೀಡುವ ಭರವಸೆಯ ಗ್ಯಾರಂಟಿ ಕಾರ್ಡ್ ಗಳಾಗಿದ್ದು ಈ ಕಾಡುಗಳನ್ನು ಹಂಚುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರಾದ ಶ್ರೀ ಲಕ್ಷ್ಮಣ್ ಮೇದಾರ್ ,ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಶ್ರೀ ಶಂಕರ್ ಸುನಿಲ್, ರಾಮು, ಶೇಕ್ ಮೈಬೂಬ್ ಸೇರಿದಂತೆ ಅನೇಕ ಬಡಾವಣೆಯ ಕಾರ್ಯಕರ್ತರಿದ್ದರು.