ಮನೆ ಮನೆಗೆ ಕರೋನಾ ಲಸಿಕೆ ಹಾಕಲು ನೂತನ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ

ಕಲಬುರಗಿ:ಏ.7:ಇಂದು ನೂತನ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಭೇಟಿ ನೀಡಿ ಯಾವ ರೀತಿಯಾಗಿ ವರ್ಷದಲ್ಲಿ 2 ಬಾರಿ ಪ್ರತಿ ವಾರ್ಡಗಳಲ್ಲು ಗ್ರಾಮಗಳಲ್ಲಿ ಮನೆ ಮನೆಗೆ ಹೋಗಿ ಲಸಿಕೆ ವಿತರಣೆ ಮಾಡುತ್ತಿರುವ ಮಾದರಿಯಲ್ಲೇ ಜಿಲ್ಲೆಯಲ್ಲಿ 2ನೇ ಹಂತದ ಕರೋನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇದರ ಮೇಲೆ ನಿಯಂತ್ರಣ ತರಲು ಜಿಲ್ಲಾಡಳಿತ ಪ್ರತಿ ಗ್ರಾಮದಲ್ಲು ಹಾಗು ಎಲ್ಲಾ ವಾರ್ಡಗಳಲ್ಲಿನ ಮನೆ ಮನೆಗಳಿಗೆ ಹೋಗಿ ಕರೋನಾ ಲಸಿಕೆ ಹಾಕಿ ಜನರ ಆರೋಗ್ಯ ಕಾಪಾಡಿಕೊಂಡು ಕರೋನಾ ಬಗ್ಗೆ ಹರಡುತ್ತಿರುವ ಭಯಾನಕ ಆತಂಕ ಕಡಿಮೆ ಮಾಡಬೇಕೆಂದು, ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ವಚನೋತ್ಸವ ಪ್ರತಿಷ್ಠಾನ ಯುವ ಘಟಕದ ಅಧಕ್ಷ ಶಿವರಾಜ ಅಂಡಗಿ ಅವರು ವಿಶ್ವ ಆರೋಗ್ಯ ದಿನಾಚರಣೆ ನಿಮಿತ್ಯ ಮನವಿ ಮಾಡಿಕೊಂಡಿದ್ದಾರೆ.
ಇದೆ ಸಂದರ್ಭದಲ್ಲಿ ಇತ್ತೀಚೆಗೆ ನೂತನವಾಗಿ ಜಿಲ್ಲಾ ಆರೋಗ್ಯಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ಡಾ. ಶರಣಬಸಪ್ಪಾ ಗಣಜಲಖೇಡ ಅವರಿಗೆ ಇಂದು ವಿಶೇಷ ದಿನ “ವಿಶ್ವ ಆರೋಗ್ಯ ದಿನಾಚರಣೆ” ನಿಮಿತ್ಯ ಡಾ. ಅವರಿಗೆ ಹೂಗುಚ್ಛ ನೀಡುವ ಮುಖಾಂತರ ಅಭಿನಂದನೆ ಸಲ್ಲಿಸುವುದರೊಂದಿಗೆ ಮನವಿ ಸಲ್ಲಿಸಲಾಯಿತು. ಇದೆ ಸಂದರ್ಭದಲ್ಲಿ ಉದ್ಯಮಿ ರವಿ ಗಣಜಲಖೇಡ ಹಾಗು ಡಾ. ಜಯಶ್ರೀ ಗಣಜಲಖೇಡ ಉಪಸ್ಥಿತರಿದ್ದರು.