ಮನೆ ಮನೆಗೆ ಕರಪತ್ರ ಹಂಚುವ ಮೂಲಕ ಪ್ರಚಾರ ಪ್ರಾರಂಭಿಸಿದ ರೆಡ್ಡಿ


ಸಂಜೆವಾಣಿ ವಾರ್ತೆ
ಗಂಗಾವತಿ, ಏ.12: ನಗರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕರಾದ ಗಾಲಿ ಜನಾರ್ಧನ ರೆಡ್ಡಿ ಪಕ್ಷದ ಪ್ರಚಾರದ ಅಂಗವಾಗಿ ಒಂದನೇ ವಾರ್ಡ್‌  ಪಂಪಾಪತಿ‌ ದೇಗುಲದಲ್ಲಿ ಕರಪತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ ಪರಮೇಶ್ವರನ ಅರ್ಶಿವಾದ ಪಡೆದು ಮನೆಮನೆಗೆ ತೆರಳಿ ಮತಯಾಚನೆ ಮಾಡಿದರು.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ ಜನಾರ್ಧನ ರೆಡ್ಡಿ ಇಂದು ರಾಂಪುರ್ ಪೇಟೆಯ ನವಣಕ್ಕಿ ನಾಗಪ್ಪ ನವರ ಮನೆಗೆ ಭೇಟಿ ನೀಡುವುದರೊಂದಿಗೆ ನಗರದಲ್ಲಿ ನಡಿಗೆಯೊಂದಿಗೆ ಮನೆ ಮನೆಗೆ ಕರಪತ್ರ ಹಂಚುವ ಮೂಲಕ ಪ್ರಚಾರ ಪ್ರಾರಂಭಿಸಿದ ಜನಾರ್ಧನ ರೆಡ್ಡಿ ಇಂದು ನಗರದ ವಾರ್ಡ್ ನಂ 1 ಮತ್ತು 3 ರಲ್ಲಿ ಪ್ರಚಾರ ಮಾಡಿದರು. ನಂತರ ಮಾತನಾಡಿದ ರಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಭಿವೃದ್ಧಿಗೊಸ್ಕರ್ ಪ್ರಾರಂಭ ಮಾಡಲಾಗಿದೆ. ನಮ್ಮ ಪಕ್ಷದಿಂದ ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ. ಗಂಗಾವತಿ ಹೆಸರನ್ನು ರಾಜ್ಯದಲ್ಲೇ ಸದ್ದು ಮಾಡುವಂತೆ ಅಭಿವೃದ್ಧಿ ಮಾಡುತ್ತೇನೆ.ಈ ಎಲ್ಲಾ ಯೋಜನೆ ಜಾರಿಯಾಗಬೇಕಾದರೆ ನಿಮ್ಮ ಅಮೂಲ್ಯವಾದ ಮತ ನೀಡಿ ಹಾರಿಸ ತರಬೇಕು ಎಂದರು.
ಈ ಸಂದರ್ಭದಲ್ಲಿ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ್, ಜಿಲ್ಲಾಧ್ಯಕ್ಷ ಮನೋಹರ ಗೌಡ, ನಗರ ಪ್ರಚಾರ ಸಮಿತಿ ಅಧ್ಯಕ್ಷ ಅಮರಜ್ಯೋತಿ ನರಸಪ್ಪ, ನಗರ ಘಟಕದ ಅಧ್ಯಕ್ಷ ವಿರೇಶ್ ಬಲ್ಕುಂದಿ, ಮುಖಂಡರಾದ ಸೈಯದ್ ಜಿಲಾನಿ ಪಾಷ,ಈ ರಾಮಕೃಷ್ಣ, ರಾಜೇಶ್ ಅಂಗಡಿ, ಸೈಯದ್ ಅಲಿ, ರಮೇಶ್‌ ಹೊಸಮಲಿ, ನಾಗರಾಜ್ ಚಳಗೇರಿ, ಶಿವಕುಮಾರ್ ಆಧೋನಿ, ರಾಜೇಶ್ ರೆಡ್ಡಿ ಸೇರಿದಂತೆ ಕಾರ್ಯಕರ್ತರು ಉಪಸ್ಥಿತಿಯಿದ್ದರು.