ಮನೆ ಮನೆಗೆ ಅಂಬೇಡ್ಕರ್ ಕಾರ್ಯಕ್ರಮ

ಶೋಷಿತರು, ಮಹಿಳೆಯರು ಅಂಬೇಡ್ಕರ್ ಋಣಿಯಲ್ಲಿದ್ದೇವೆ
ರಾಯಚೂರು,ಫೆ.೨೬- ಸ್ವಾತಂತ್ರ್ಯ ಭಾರತದಲ್ಲಿ ಮಹಿಳೆಯರಿಗೆ, ಶೋಷಿತ ತಳ ಸಮುದಾಯಗಳಿಗೆ ಸಂವಿಧಾನದ ಮೂಲಕ ಅಧಿಕಾರ, ಆರ್ಥಿಕ ಶಕ್ತಿ ಮತ್ತು ಮೂಲಭೂತ ಹಕ್ಕುಗಳನ್ನು ನೀಡಿದವರು ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ರಾಯಚೂರಿನ ಹಿರಿಯ ಸಾಹಿತಿ ವೀರಹನುಮಾನ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ನಿಜಲಿಂಗಪ್ಪ ಕಾಲೋನಿಯಲ್ಲಿ ನಂದಿನಿ – ಡಾ.ಬಸವರಾಜ ಕಳಸ ಇವರ ಮನೆಯಲ್ಲಿ ಬಹುಜನ ಸಂಘರ್ಷ ಸಮಿತಿಯಿಂದ ಶನಿವಾರ ಆಯೋಜಿಸಿದ್ದ, ೫೩ನೇ ಮನೆ-ಮನೆಗೆ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಮಾತನಾಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ರವರು ದೇಶದಲ್ಲಿರುವ ಪ್ರಾದೇಶಿಕ ಅಸಮಾನತೆ, ಆಹಾರದ ಸಮಸ್ಯೆ,ಹಣಕಾಸಿನ ಸಮಸ್ಯೆ, ರಾಜ್ಯಗಳ ಒಕ್ಕೂಟ,ಅನೇಕ ಭಾಷೆ, ಧರ್ಮಗಳು,ಜಾತಿ ಸಮಸ್ಯೆ ಇವೆಲ್ಲವುಗಳಿಗೆ ಸಂವಿಧಾನದಲ್ಲಿ ಪರಿಹಾರ ನೀಡಿದ್ದಾರೆ. ಪ್ರತಿಯೊಬ್ಬರು ಸಮಾನತೆಯಿಂದ ಸ್ವತಂತ್ರವಾಗಿ,ಭ್ರಾತೃತ್ವದಿಂದ ಬದುಕಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಯಚೂರಿನ ಹಿರಿಯ ಖ್ಯಾತ ನ್ಯಾಯವಾದಿಗಳಾದ ಶಶಿಧರಗೌಡ ಪಾಟೀಲ್ ಮಾತನಾಡಿ,ಭಾರತದ ಸಂವಿಧಾನವನ್ನು ಪ್ರತಿಯೊಬ್ಬರು ಓದಲೇಬೇಕು.ಇದು ಅರ್ಥವಾಗಬೇಕಾದರೆ ಮೊದಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಓದಬೇಕು.ಆಗ ಮಾತ್ರ ಎಲ್ಲವೂ ಅರ್ಥವಾಗಲೂ ಸಾದ್ಯ. ಭಾರತದ ಸಂವಿಧಾನ ಸರ್ವರಿಗೂ ಮೂಲಭೂತ ಹಕ್ಕುಗಳನ್ನು ನೀಡಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಹುಜನ ಸಂಘರ್ಷ ಸಮಿತಿ ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ, ವೈದ್ಯರಾದ ಶಾರದ ಪಿ.ಹುಲಿನಾಯಕ, ಅಧ್ಯಕ್ಷತೆ ವಹಿಸಿದ್ದ ರಾಯಚೂರು ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಡಾ.ಬಸವರಾಜ ಕಳಸ ಮಾತನಾಡಿದರು. ಶಿಕ್ಷಕರಾದ ಶಿವಪ್ಪ ನಾಯಕ ಕಲ್ಲೂರು, ಪಾಲಾಕ್ಷ ಕಲ್ಲೂರು ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಬಸಂಸ ಮಹಾಪೋಷಕ ಎಂ.ಆರ್.ಭೇರಿ, ಹಿರಿಯರಾದ ಆಂಜಿನೇಯ್ಯ ಜಾಲಿಬೆಂಚಿ,ಜಾನ್ ವೆಸ್ಲಿ, ದೊಡ್ಡಪ್ಪ ವಕೀಲರು,ಎನ್.ಬಿ.ಲಕ್ಷ್ಮೀರೆಡ್ಡಿ, ತಾಯಪ್ಪ ಭಂಡಾರಿ ವಕೀಲರು,ರಮೇಶ ಕಲ್ಲೂರಕರ್, ಆರೀಫ್ ಮೀಯಾ ನೆಲಹಾಳ, ವೆಂಕಯ್ಯಶೆಟ್ಟಿ ಹೋಸಪೇಟೆ,ಕಾಮರಾಜ ಪಾಟೀಲ್, ಬಸವರಾಜ ಮಿಮಿಕ್ರಿ,ವಿನಯ್ ಕಮಾರ್ ಚಿತ್ರಗಾರ,ಚಂದ್ರಶೇಖರ್ ಭಂಡಾರಿ, ಚಾಂದಪಾಷ ಹನುಮಪೂರ, ವೆಂಕಟೇಶ ದಿನ್ನಿ, ಪ್ರಸಾದ್,ಎಸ್ ಎಫ್ ಐ ರಾಜ್ಯ ಉಪಾಧ್ಯಕ್ಷ ಶಿವುಕುಮಾರ್ ಮ್ಯಾಗಳಮನಿ, ವಕೀಲರು,ಸೇರಿದಂತೆ ಮಹಿಳೆಯರು, ಯುವಕರು,ಮಕ್ಕಳು ಭಾಗವಹಿಸಿದ್ದರು.