ಮನೆ ಮನೆಗೂ ಜೆ.ಡಿ.ಎಸ್ ಪಕ್ಷ


ಸಂಜೆವಾಣಿ ವಾರ್ತೆ
ಸಂಡೂರು :ಜ:12 ಸಂಡೂರು ವಿಧಾನಸಭಾ ಕ್ಷೇತ್ರ ನಿಯೋಜಿತ ಅಭ್ಯರ್ಥಿ ಕುರೇಕುಪ್ಪದ ಎನ್. ಸೋಮಪ್ಪ ಸಾರಥ್ಯದಲ್ಲಿ ನೂರಾರು ಕಾರ್ಯಕರ್ತರನ್ನೊಳಗೊಂಡು ಪದಾಧಿಕಾರಿಗಳು ಸೇರಿ ಜೆ.ಡಿ.ಎಸ್. ಪಕ್ಷ ಪಾದ ಯಾತ್ರೆಯ ಮೂಲಕ ಮನೆಮನೆಗೂ ಸೋಮಣ್ಣ ಎನ್ನುವ ಕಾರ್ಯಕ್ರಮ 7 ಬೆಂಚಿ ಗ್ರಾಮ ದಿಂದ ಚಾಲನೆ ನೀಡಿದ ಮೂಲಕ ಮಾದಾಪುರ ಗ್ರಾಮದಲ್ಲಿ ಜೆ.ಡಿಎಸ್. ಪಕ್ಷದ ಮಾಜಿ ಮುಖ್ಯಮಂತ್ರಿ ಅಧಿಕಾರ ಅವಧಿಯಲ್ಲಿ ಮಾಡಿದಂಥಹ ಜನಪರ ಯೋಜನೆಗಳ ಬಗ್ಗೆ ಮತ್ತು ಪಂಚರತ್ನ ಯೋಜನೆ ಬಗ್ಗೆ ಮತದಾರರ ಬಗ್ಗೆ ಮನೆ ಮನೆಗೂ ಮುಟ್ಟಿಸುತ್ತಾ ರಾತ್ರಿ ವೇಳೆ ಸಮಯದಲ್ಲಿ ಹಳೇ ದರೋಜಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದರು. ಈ ಸಂದರ್ಭದಲ್ಲಿ ಮಲ್ಲೇಶ್ ಕಮತೂರು ದೊಡ್ಡಮನಿ ಹುಸೇನ್ ಸಾಬ್ ರಫೀಕ್, ನಿಂಗಪ್ಪ ಹೊನ್ನೂರ ಸಾಬ್ ಜೆ.ಡಿ.ಎಸ್. ಮಹಿಳಾ ಮೋರ್ಚದವರು ಉಪಸ್ಥಿತರಿದ್ದರು.