
ಎನ್.ವೀರಭದ್ರಗೌಡ
ಬಳ್ಳಾರಿ, ಮಾ.07: ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ. ಮನೆ ಮನೆಗೂ ನೀಡುವ ಗ್ಯಾರೆಂಟಿಗಳ ಬಗ್ಗೆ ತಳ ಮಟ್ಟದ ಪ್ರಚಾರ ಕಾರ್ಯ ನಗರದಲ್ಲಿ ಆರಂಭಿಸಲಾಗಿದೆ.
ಕಳೆದ ತಿಂಗಳು ಬೆಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ನಗರದಲ್ಲಿ ಈ ಬಗ್ಗೆ ಸಭೆ ನಡೆಸಿ ಪ್ರತಿ ಕುಟುಂಬಕ್ಕೆ ಮಾಸಿಕ 2 ಸಾವಿರ ರೂ ಸಹಾಯಧನ, 200 ಯೂನಿಟ್ ವಿದ್ಯುತ್ ಉಚಿತ ಜೊತೆಗೆ ಬಡ ಕುಟುಂಬದ ಪ್ರತಿ ವ್ಯಕ್ತಿಗೆ ಮಾಸಿಕ 10 ಕಿಲೋ ಅಕ್ಕಿ ನೀಡುವ ಯೋಜನೆಗಳ ಬಗ್ಗೆ ತಾವು ನೀಡುವ ಗ್ಯಾರೆಂಟಿ ಎಂದು ಕೆಪಿಸಿಸಿ ಹೇಳಿತ್ತು.
ಈಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಹಿ ಮಾಡಿರುವ ಈ ಗ್ಯಾರೆಂಟಿ ಕಾರ್ಡುಗಳನ್ನು ಆಯಾ ವಾರ್ಡಿನ ಕಾರ್ಪೊರೇಟರ್ ಇಲ್ಲಾ ಮುಖಂಡರು ಮನೆ ಮನೆಗೆ ತೆರಳಿ ನೀಡುತ್ತಿದ್ದಾರೆ.
ಜಿಎಸ್ ಟಿ ಪರಿಹಾರಕ್ಕೆ 500, ಬೆಲೆ ಏರಿಕೆಗೆ 1000, ಗ್ಯಾಸ್ ಸಿಲಿಂಡರ್ ಗೆ 500 ರೂ ಸೇರಿ ಮಾಸಿಕ ಎರೆಡು ಸಾವಿರ ನೀಡಲಿದೆಂದು ವಿವರಿಸಿ ಹೇಳುತ್ತಿದ್ದಾರೆ. ಈ ಹಣ ನಿಮ್ಮ ಖಾತೆಗೆ ನೇರವಾಗಿ ಬೀಳಲಿದೆ. ಇದರಲ್ಲಿ ಬಡವರು, ಶ್ರೀಮಂತರು ಎಂಬ ಬೇದ ಭಾವ ಇಲ್ಲ ಎಲ್ಲಾ ಕುಟಂಬಗಳಿಗೆ ನೀಡಲಿದೆ. ಇದರಿಂದ ವಾರ್ಷಿಕ 24 ಸಾವಿರ, ಐದು ವರ್ಷದಲ್ಲಿ ಒಂದು ಲಕ್ಷದ 20 ಸಾವಿರ ನೀಡಲಿದೆ. ಇದಲ್ಲದೆ ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವುದರಿಂದ ಪ್ರತಿ ಕುಟುಂಬ ವಾರ್ಷಿಕ 35 ರಿಂದ 40 ಸಾವಿರ ರೂ ಪಡೆದಂತಾಗುತ್ತದೆ. ಐದು ವರ್ಷದಲ್ಲಿ 2 ಲಕ್ಷದ 40 ಸಾವಿರ ದೊರೆತಂತಾಗುತ್ತದೆ ಎಂದು ತಿಳಿಸುತ್ತಿದ್ದಾರೆ.
ಈ ಕಾರ್ಯಕ್ಕೆ ನಿನ್ನೆ ಸಂಜೆ ನಗರದ 3 ವಾರ್ಡಿನಲ್ಲಿ ರಾಜ್ಯ ಸಭಾ ಸದಸ್ಯ ಡಾ.ಸಯ್ಯದ್ ನಾಸೀರ್ ಹುಸೇನ್ ಚಾಲನೆ ನೀಡಿದ್ದಾರೆ.
ಕಿರು ಸಭೆಗಳನ್ನು ನಡೆಸಿ ಜನರಿಗೆ ಕಾಂಗ್ರೆಸ್ ಪಕ್ಷದ ಗ್ಯಾರೆಂಟಿಗಳ ಬಗ್ಗೆ ಮತದಾರರ ಮನದಾಳಕ್ಕೆ ಮುಟ್ಟುವಂತೆ ವಿವರಿಸಿದ್ದಾರೆ. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಎಂ.ಪ್ರಭಂಜನ್ ಕುಮಾರ್, ಪ್ರಚಾರ ಸಮಿತಿಯ ವೆಂಕಟೇಶ್ ಹೆಗಡೆ. ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎಸ್.ಎಲ್.ಸ್ವಾಮಿ,ಮಾಜಿ ಮೇಯರ್ ಜಿ.ವೆಂಕಟರಮಣ, ಮುಖಂಡ ಮುಂಡರಗಿ ನಾಗರಾಜ್ ಮೊದಲಾದವರು ಇದ್ದರು.
ಇಷ್ಟೇ ಅಲ್ಲದೆ. ಆಯಾ ಓಣಿಯ ಮನೆಗಳ ಜನರನ್ನು ಒಂದೊಂದಡೆ ಸೇರಿಸಿ. ಈ ಗ್ಯಾರೆಂಟಿ ಕಾರ್ಡುಗಳಿಗೆ ಅವರ ಹೆಸರು, ವಾರ್ಡ್ ಸಂಖ್ಯೆ, ಬೂತ್ ಸಂಖ್ಯೆ ಮೊಬೈಲ್ ನಂಬರ್, ವಿಳಾಸ ಬರೆದು ವಿತರಿಸುವ ಕಾರ್ಯಕ್ಕೆ ಸಹ ಪಾಲಿಕೆ ಸದಸ್ಯ ಎಂ.ಪ್ರಭಂಜನ್ ಕುಮಾರ್ ಆರಂಭಿಸಿದ್ದಾರೆ.
ಇದೇ ರೀತಿ ಇತರೇ ವಾರ್ಡುಗಳಲ್ಲಿ ಸಹ ಇನ್ನಿತರ ಸದಸ್ಯರು, ಮುಖಂಡರು ಮಾಡಲು ಪಕ್ಷ ಸೂಚಿಸಿದೆಯಂತೆ. ಒಟ್ಟಾರೆ ಕಾಂಗ್ರೆಸ್ ಗ್ಯಾರೆಂಟಿ ಬಗ್ಗೆ ಮಬೆ ಮನೆಗೂ ತಿಳಿಸುವ ಮಹತ್ವದ ಕಾರ್ಯ ಇದಾಗಿದೆ.
ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಮನೆ ಮನೆಗೂ ಆ ಪಕ್ಷದ ಕಾರ್ಯಕರ್ತರು ತೆರಳಿ ಕರಪತ್ರ ಹಂಚಿ ತಿಳಿಸುವುದಕ್ಕೆ. ಪರ್ಯಾಯವಾಗಿ ಕಾಂಗ್ರೆಸ್ ಈ ಗ್ಯಾರೆಂಟಿ ಯೋಜನೆ ಯಶಸ್ವಿಯಾಗಿ ನಡೆಸತೊಡಗಿದೆ.
ನಾವು ಅಧಿಕಾರಕ್ಕೆ ಬಂದರೆ ನಿಮ್ಮ ಖಾತೆಗೆ ವಿದೇಶದಲ್ಲಿರುವ ಈ ದೇಶದವರ ಬ್ಲಾಕ್ ಮನಿಯಿಂದ ನಿಮ್ಮ ಖಾತೆಗೆ 15 ಸಾವಿರ ರೂ ಹಾಕಲಿದೆ ಎಂದು ಮೋದಿಯವರಂತೆ ನಾವು ಸುಳ್ಳು ಹೇಳಲ್ಲ. ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸಿದ್ದಾರೆ. ಅವರ ಕುಟುಂಬಗಳಿಗೆ ಆರ್ಥಿಕವಾಗಿ ನೆರವಾಗುವ ದೃಷ್ಡಿಯಿಂದ ಈ ಗ್ಯಾರೆಂಟಿ ಸ್ಕೀಮ್ ನ್ನು ಪಕ್ಷ ನೀಡಲಿದೆ.
ಡಾ.ಸಯ್ಯದ್ ನಾಸೀರ್ ಹುಸೇನ್
ರಾಜ್ಯ ಸಭಾ ಸದಸ್ಯರು, ಬಳ್ಳಾರಿ.