ಮನೆ ಮನೆಗಳಲ್ಲಿ ಸಂಭ್ರಮದ ಪೂಜೆ

ವರಮಹಾಲಕ್ಷ್ಮಿ ಹಬ್ಬ :ಹೂವು ಹಣ್ಣು ವ್ಯಾಪಾರ ಜೋರು
ಲಿಂಗಸುಗೂರು.ಆ.೦೫- ಹಬ್ಬಗಳಲ್ಲಿ ವಿಶೇಷವಾಗಿ ಆಚರಿಸುವರು ಅದರಲ್ಲಿ ಮಹಿಳೆಯರು ವರಮಹಾಲಕ್ಷ್ಮಿ ಹಬ್ಬ ಅಂದರೆ ನಾಡಿನಲ್ಲಿ ಭಾರತಿಯ ಪ್ರಾಚೀನ ಕಾಲದಿಂದಲೂ ನಡೆದು ಬಂದ ವರಮಹಾಲಕ್ಷ್ಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಲಕ್ಷ್ಮೀ ದೇವಿ ಎನ್ನುವಾಕೆ ಭಾರತದ ನಾರಿಯರ ಸಮೃದ್ದಿಯ ದೇವತೆ ಹಣದ ಸುತ್ತಲೂ ಹೆಣೆದುಕೊಂಡಿರುವ ನಮ್ಮ ಕಾಲದ ಕಲ್ಪನೆಗಿಂತ ಬಹಳ ವಿಸ್ತಾರವಾಗಿದೆ ಈ ಬಾರಿಯ ವರಮಹಾಲಕ್ಷ್ಮೀ ವ್ರತವು ನಾಡಿಗೂ ಕಾಡಿಗೂ ಮನುಷ್ಯನ ಬದುಕಿಗೂ ಜನತೆಗೆ ಸಮೃದ್ಧಿಯನ್ನು ತರಲಿ. ಇಂದು ಆಚರಣೆ ಮಾಡುತ್ತಿರುವ ಹಬ್ಬವನ್ನು ಹಿಳೆಯರಿಗೆ ಆತ್ಮವಿಶ್ವಾಸವೇ ಕೊಡಲಿ ಆ ವರಮಹಾಲಕ್ಷ್ಮೀ ಪೂಜೆ ಮಾಡುವುದರಿಂದ ನಾವು ಪುನೀತರಾಗುತ್ತೆವೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ ಎಂಬುದು ಎಲ್ಲರ ಅಭಿಪ್ರಾಯ ಪಟ್ಟಿದ್ದಾರೆ.
ಶುಕ್ರವಾರದ ವರ ಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಲಿಂಗಸುಗೂರ ಪಟ್ಟಣದಲ್ಲಿ ಗುರುವಾರ ಹೂವು, ಹಣ್ಣು, ತರಕಾರಿ ವ್ಯಾಪಾರ ಬಲು ಜೋರಾಗಿತ್ತು. ಶ್ರಾವಣ ಶುಕ್ಲ ಪೂರ್ಣಿಮೆಯ ಹಿಂದಿನ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವನ್ನು ಮಹಿಳೆಯರು ಶ್ರದ್ಧಾ ಭಕ್ತಿಗಳಿಂದ ಆಚರಿಸುತ್ತಾರೆ. ಇದರ ಅಂಗವಾಗಿ ಮಹಿಳೆಯರು ಹೂವು, ಹಣ್ಣು, ತರಕಾರಿ, ಸೀರೆ ಮತ್ತಿತರ ಉಡುಪುಗಳ ಖರೀದಿಯಲ್ಲಿ ತೊಡಗುವುದು ಸಾಮಾನ್ಯ. ಅಂತೆಯೇ ಗುರುವಾರ ಮಾರುಕಟ್ಟೆಯಲ್ಲಿ ಪೂಜೆಗೆ ಅಗತ್ಯ ಪದಾರ್ಥಗಳನ್ನು ಮಹಿಳೆಯರು ಮುಗಿಬಿದ್ದು ಖರೀದಿಸುತ್ತಿದ್ದರು.
ಲಿಂಗಸುಗೂರ ಬಸಸ್ತ್ಯಾಂಡ್ ಮುಂದೆ ಹಣ್ಣು, ಹೂವುಗಳ ಮಾರಾಟದ ಭರಾಟೆ ನಡೆದಿತ್ತು. ಹೂವು, ಹಣ್ಣು, ತರಕಾರಿ ಜೊತೆಗೆ ಅರಿಶಿನ, ಕುಂಕುಮ, ಗಾಜಿನ ಬಳೆ ಖರೀದಿಸಿದರು.
ಶ್ರಾವಣ ಮಾಸದಲ್ಲಿ ನಾಗರಪಂಚಮಿ ನಂತರ ಬರುವ ಮುಖ್ಯವಾದ ಹಬ್ಬ ವರಮಹಾಲಕ್ಷ್ಮೀ ವ್ರತ. ಲಕ್ಶ್ಮೀ ಎಂದಾಕ್ಷಣ ಹಣ ಅಥವಾ ಐಶ್ವರ್ಯವಷ್ಟೇ ಅನುಗ್ರಹಿಸುವ ದೇವತೆ ಎಂಬುದು ಹಲವರ ನಂಬಿಕೆ. ಆದರೆ ಲಕ್ಷ್ಮಿ ಅಂದರೆ ವಿದ್ಯೆ ನೀಡುವ, ಮನೆಯಲ್ಲಿ ಧಾನ್ಯದ ಸಮೃದ್ಧಿ ಕೊಡುವ, ಒಟ್ಟಾರೆ ಅಷ್ಟ ಲಕ್ಷ್ಮಿ ಸ್ವರೂಪದಲ್ಲಿ ಬದುಕಿನ ಏಳ್ಗೆಗೆ, ಸಮೃದ್ಧಿಗೆ ಏನೇನು ಬೇಕೋ ಎಲ್ಲವನ್ನೂ ದಯ ಪಾಲಿಸುವ ಮಹಾ ತಾಯಿ ಆಕೆ.
ಬಡತನ-ಸಿರಿತನ ಅನ್ನೋದರ ವ್ಯತ್ಯಾಸವಿಲ್ಲದೆ ಬದುಕಿನಲ್ಲಿ ಹಬ್ಬವನ್ನು ಬರ ಮಾಡಿಕೊಳ್ಳುವ ಮಾಸ ಶ್ರಾವಣ. ಕುಟುಂಬ ಸಮೇತವಾಗಿ ಹಬ್ಬ ಆಚರಿಸಿ, ನಿನ್ನೆಗಿಂತ ಇಂದು, ಇಂದಿಗಿಂತ ನಾಳೆ ಹೆಚ್ಚು ಚೆನ್ನಾಗಿರಲಿ, ಸಂಭ್ರಮವಿರಲಿ ಎಂದು ಆ ದೇವರನ್ನು ಬೇಡಿಕೊಳ್ಳುತ್ತೇವೆ.