ಮನೆ ಮನೆಗಳಲ್ಲಿ ರಾರಾಜಿಸಲಿ ರಾಷ್ಟ್ರಧ್ವಜ : ಮರತೂರಕರ್ ಮನವಿ

ಕಲಬುರಗಿ: ಜು.24:ಆ.13 ರಿಂದ 15ರವರೆಗೆ ಪ್ರತಿ ಮನೆ-ಮನೆಗಳಲ್ಲಿ ಹಾರಾಡಲಿರುವ ತ್ರಿವರ್ಣ ಧ್ವಜದ ಒಗ್ಗಟ್ಟನ್ನು ಎಲ್ಲರೂ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಮನೆಗಳಲ್ಲಿ ಪ್ರದರ್ಶಿಸಬೇಕು ಎಂದು ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ರವರು ಮನವಿ ಮಾಡಿದರು.ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಮಹಮಾರಿ ಕೊರೊನಾ ಸಂದರ್ಭ 200 ಕೋಟಿ ಲಸಿಕೆಯನ್ನು ಉಚಿತವಾಗಿ ನೀಡಲಾಗಿದೆ ಈ ನಿಟ್ಟಿನಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಹೇಳಿದರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಹರ್ ಘರ್ ತಿರಂಗಾ ಘೋಷಣೆಯ ನೊಂದಿಗೆ ಎಲ್ಲರ ಮನೆಯಲ್ಲಿ ಅಗಸ್ಟ್ 9 ರಿಂದ 15 ರವರೆಗೆ ಧ್ವಜ ರಾರಾಜಿಸಬೇಕು. ಇದರೊಂದಿಗೆ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಕತೆಯನ್ನು ತಿಳಿಸುವ ಕಾರ್ಯವಾಗಬೇಕು ಎಂದರು. ಭಾರತ ಈಗಾಗಲೇ 75 ನೇ ವರ್ಷದ ಹೊಸ್ತಿಲಿನಲ್ಲಿದೆ ಅಂದರೆ ಮುಂದಿನ ತಿಂಗಳ ಅಮೃತ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ ಕೇಂದ್ರ ಸರಕಾರದ ನಿರ್ಧಾರವನ್ನು ಅವರು ಸ್ವಾಗತಿಸಿದರು. ಪ್ರಧಾನಿ ನರೇಂದ್ರ ಮೋದಿ ಅಗಸ್ಟ್ 13-15 ರ ನಡುವೆ ತಮ್ಮ ಮನೆಗಳಲ್ಲಿ ತ್ರಿವರ್ಣ ಹಾರಿಸುವ ಅಥವಾ ಪ್ರದರ್ಶಿಸುವ ಮೂಲಕ ‘ ಹರ್ ಘರ ತಿರಂಗ’ ಆಂದೋಲನವನ್ನು ಬಲಪಡಿಸುವಂತೆ ದೇಶದ ಜನತೆಗೆ ಮನವಿ ಮಾಡಿಕೊಂಡಿದ್ದಾರೆ ಈ ನಿಟ್ಟಿನಲ್ಲಿ ದೈರ್ಯ, ಶಾಂತಿ, ಸತ್ಯ ಮತ್ತು ಶ್ರೇಯಸ್ಸಿನ ಸಂಕೇತ, ನಮ್ಮ ತಿರಂಗ ಪ್ರತಿಯೊಬ್ಬ ಭಾರತೀಯನ ಹೆಮ್ಮೆ. ಅಗಸ್ಟ್13 ರಿಂದ 15 ರವರೆಗೆ ನಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ನಮ್ಮ ಹೆಮ್ಮೆಯನ್ನು ಪ್ರದರ್ಶಿಸಲು ಒಟ್ಟಾಗಿ ಬನ್ನಿ ಮತ್ತು ‘ ಹರ್ ಘರ್ ತಿರಂಗ’ ಅನ್ನು ನಮ್ಮ ಜೀವನದ ಧ್ಯೇಯ ವಾಕ್ಯವನ್ನಾಗಿ ಮಾಡೋಣ ಎಂದರು.