ಮನೆ, ಮನದಲ್ಲಿ ಹಾಜೀ ಸರ್ವರ್ ನೆನದ ಭಕ್ತರು

ವಾಡಿ:ಮೇ.1: ಲಾಡ್ಲಾಪೂರ ಗ್ರಾಮದ ಹಜರತ ಹಾಜೀ ಸರ್ವರ (ಹಾದಿಶರಣ) ಜಾತ್ರೆಯು ಕೊರೊನಾ 2ನೇ ಅಲೆಯಿಂದ, ತಾಲ್ಲೂಕ ಆಡಳಿತ ಸಂಪ್ರದಾಯಕ್ಕೆ ಸೀಮಿತಗೊಳಿಸಿತ್ತು. ಸಾವಿರಾರು ಜನಸಂಖ್ಯೆ ಸೇರುವ ಜಾತ್ರೆಯು ಜನರಿಲ್ಲದೇ, ಎಲ್ಲೆಂದರಲ್ಲಿ ಪೋಲಿಸರು ಬೀಡು ಬಿಟ್ಟಿರುವುದು ಕಂಡು ಬಂತು.

ಚಿತ್ತಾಪೂರ ತಾಲ್ಲೂಕಿನ ಲಾಡ್ಲಾಪೂರ ಗ್ರಾಮದ ಆರಾಧ್ಯ ದೈವ ಹಾದಿಶರಣನ ಜಾತ್ರೆಗೆ ಬೆಳಗ್ಗೆ ಜನರು ನೈವಿಧ್ಯ ನೀಡಲೆಂದು ಗುಡ್ಡದ ದೇವರ ದರ್ಶನತ್ತ ದಾವಿಸುತ್ತಿರುವಾಗಲೇ ಪೊಲೀಸ್‍ರ ದರ್ಶನ ನೋಡಿ ಜನರು ದಿಕ್ಕಪಾಲಾಗಿ ಓಡಿದರೆ, ಇನ್ನು ಕೆಲವರು ಬೆತ್ತದ ರುಚಿಯನ್ನು ಸವಿದರು. ರಸ್ತೆಯ ಮಧ್ಯೆ ಪೊಲೀಸ್‍ರು ಬೀಡು ಬಿಟ್ಟಿರುವುದನ್ನು ಕಂಡರು ಕೂಡಾ ಜನರು ನಿರ್ಭಯವಾಗಿ ದೇವರಿಗೆ ಕಾಯಿ, ಕರ್ಪೂರ್ ಅರ್ಪಿಸಲೆಂದು ಬಂದಿದ್ದೆವೆ ಎಂದರು.

ಕುಪಿತಗೊಂಡ ಪಿಎಸ್‍ಐ ವಿಜಯಕುಮಾರ ಬಾವಗಿ, ಪ್ರತಿಯೊಂದು ತಾಂಡಾಗಳಿಗೆ ಈಗಾಗಲೇ ಜಾತ್ರೆ ರದ್ದಾಗಿರುವ ಕುರಿತು ಗ್ರಾಮ ಪಂಚಾಯತ ವತಿಯಿಂದ ಹಾಗೂ ಪೊಲೀಸ್ ಪರೇಡ್ ಮಾಡುವ ಮೂಲಕ ಮನವಿ ಮಾಡಿದ್ದೆವೆ. ಆದರೂ, ನಿಮಗೆ ಅರ್ಥವಾಗುವುದಿಲ್ಲವೇ ಎಂದು ಆಕ್ರೋಶ ಭರಿತರಾಗಿ ಜನರಿಗೆ ಸಂದೇಶ ರವಾನಿಸಿದರು.

50 ಸಾವಿರಕ್ಕೂ ಅಧಿಕ ಜನ ಸೇರುವ ಜಾತ್ರೆಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಂಡು ಜನರಿಲ್ಲದೆ ಸಂಪ್ರದಾಯಬದ್ದ ಕಾರ್ಯಕ್ರಮಕ್ಕೆ ಸೀಮಿತಗೊಳಿಸಿದರು. ಗುರುವಾರ ರಾತ್ರಿ ಸೀಮಿತ ಜನರು ದೇವರ ಮೂರ್ತಿಗಳನ್ನು ಗುಡ್ಡದ ಮೇಲೆ ತೆಗೆದುಕೊಂಡು ಪೂಜಾ ಕಾರ್ಯಕ್ರಮವನ್ನು ನೇರವೇರಿಸಿದರು.

ಗ್ರಾಮದ ಜನರು ಮನೆ, ಮನದಲ್ಲಿಯೇ ಹಾದಿಶರಣನನ್ನು ನೆನೆದು ಕಾನೂನಿಗೆ ಗೌರವ ತೊರಿದರು. ದೇವರ ಹೆಸರಿನಲ್ಲಿ ನಡೆಯುತ್ತಿದ್ದ ಕುರಿ ಹರಕೆ ಕಳೆದ 2 ವರ್ಷದಿಂದ ಬಚಾವ ಆಗುತ್ತಿದೆ. ಈ ಸಂಧರ್ಭದಲ್ಲಿ ವಿಶೇಷ ಪೇದೆ ದೊಡ್ಡಪ್ಪ ಪೂಜಾರಿ, ದತ್ತು ಜಾನೆ, ಪೇದೆಗಳಾದ ಮಾಲನಬೀ, ಮಧುಕರ್ ಸೇರಿದಂತೆ ಕೆಎಸ್‍ಆರ್‍ಪಿ ಸ್ಥಳದಲ್ಲಿ ನಿಯೋಜಿಸಲಾಗಿತ್ತು.