ಮನೆ ಬೀಗ ಮುರಿದು 80 ಸಾವಿರ ರೂ.ಮೌಲ್ಯದ ಚಿನ್ನಾಭರಣ ಕಳವು

ಕಲಬುರಗಿ,ಮೇ.28-ಮನೆ ಬೀಗ ಮುರಿದು 80 ಸಾವಿರ ರೂ.ಮೌಲ್ಯದ ಚಿನ್ನಾಭರಣ ದೋಚಿಕೊಂಡು ಹೋದ ಘಟನೆ ದರಿಯಾಪುರ ಜಿಡಿಎ ಲೇಔಟ್‍ನಲ್ಲಿ ನಡೆದಿದೆ.
ಈ ಸಂಬಂಧ ದಿನೇಶ ತಂದೆ ನರಸಿಂಗ್ ಕಾಂಬಳೆ ಎಂಬುವವರು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ತಾವು ರಾತ್ರಿ ಪಾಳಿ ಕೆಲಸಕ್ಕೆ, ಪತ್ನಿ ನೃಪತುಂಗ ಕಾಲೋನಿಯಲ್ಲಿರುವ ತಾಯಿಯ ಮನೆಗೆ ಹೋದಾಗ ಕಳ್ಳರು ಮನೆ ಬೀಗ ಮುರಿದು 40 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಸುತ್ತುಂಗುರ ಮತ್ತು 40 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಲಾಕೆಟ್ ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸ್ಟೇಷನ್ ಬಜಾರ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.