ಮನೆ ಬೀಗ ಮುರಿದು 8 ಲಕ್ಷ ರೂ.ಮೌಲ್ಯದ ನಗ-ನಾಣ್ಯ ಕಳವು

ಕಲಬುರಗಿ,ಏ.1-ನಗರದ ಹೈಕೋರ್ಟ್ ಬಳಿಯ ಕಾಶಿ ಕಮಲ್ ಅಪಾರ್ಟ್‍ಮೆಂಟ್‍ನ ನಾಲ್ಕು ಮನೆಗಳ ಬೀಗ ಮುರಿದು ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ನಗ-ನಾಣ್ಯ ದೋಚಿಕೊಂಡು ಹೋದ ಘಟನೆ ನಡೆದಿದೆ.
ರಮೇಶ ಪಾಟೀಲ ಅಫಜಲಪುರ ಎಂಬುವವರ ಮನೆ ಬೀಗ ಮುರಿದು 11 ತೊಲೆ ಚಿನ್ನ ಹಾಗೂ 50 ಸಾವಿರ ರೂ.ನಗದು, ಮಲ್ಲಿಕಾರ್ಜುನ ಎಂಬುವವರ ಮನೆ ಬೀಗ ಮುರಿದು 5 ತೊಲೆ ಚಿನ್ನ ಕಳವು ಮಾಡಲಾಗಿದ್ದು, ಇನ್ನೆರಡು ಮನೆಗಳ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಲಾಗಿದೆ.
ಮನೆಯಲ್ಲಿ ವಾಸವಿದ್ದವರು ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋಗಿದ್ದಾಗ ಈ ಕಳ್ಳತನ ನಡೆದಿದೆ ಎಂದು ತಿಳಿದುಬಂದಿದೆ.
ಸುದ್ದಿ ತಿಳಿದು ಅಶೋಕನಗರ ಪೊಲೀಸ್ ಠಾಣೆಯ ಪಿಐ ಹಾಗೂ ಸಿಬ್ಬಂದಿ, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.