
ಕಲಬುರಗಿ,ಆ.19-ಮನೆ ಬೀಗ ಮುರಿದು 77 ಸಾವಿರ ರೂ.ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ಕಳವು ಮಾಡಿರುವ ಘಟನೆ ಆಜಾದಪುರ ರಸ್ತೆಯ ಹುಂಡೇಕರ್ ಕಾಲೋನಿಯಲ್ಲಿ ನಡೆದಿದೆ.
ಮಹಿಬೂಬ್ ಸಾಬ್ ಎಂಬುವವರ ಮನೆ ಬೀಗ ಮುರಿದು ಅಲಮಾರಿಯಲ್ಲಿದ್ದ 25 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಜೀರಾಮಣಿ, 25 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಮಂಗಳಸೂತ್ರ 3.5 ಗ್ರಾಂ.ಬಂಗಾರದ ಕಿವಿಯೋಲೆ, 18 ಸಾವಿರ ರೂ.ಮೌಲ್ಯದ 3.5 ಗ್ರಾಂ.ಬಂಗಾರದ ಕಿವಿಯೋಲೆ, 4 ಬೆಳ್ಳಿ ಕಾಲು ಚೈನ್, ಕಾಲುಂಗರ ಸೇರಿ 77 ಸಾವಿರ ರೂ.ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.
ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.