ಮನೆ ಬೀಗ ಮುರಿದು 37 ಸಾವಿರ ರೂ.ಮೌಲ್ಯದ ಬೆಳ್ಳಿ, ಬಂಗಾರ ಕಳವು

ಕಲಬುರಗಿ,ಆ.7-ಮನೆ ಬೀಗ ಮುರಿದು 37,500 ರೂ.ಮೌಲ್ಯದ ಬೆಳ್ಳಿ ಮತ್ತು ಬಂಗಾರ ದೋಚಿಕೊಂಡು ಹೋಗಿರುವ ಘಟನೆ ಇಲ್ಲಿನ ಜೆ.ಆರ್.ನಗರದಲ್ಲಿ ನಡೆದಿದೆ.
ಆಳಂದ ತಾಲ್ಲೂಕಿನ ಜವಳಿ (ಡಿ) ಗ್ರಾಮದಲ್ಲಿ ಶಿಕ್ಷಕರಾಗಿರುವ ವಿಶ್ವನಾಥ ಮಠ ಎಂಬುವವರ ಮನೆ ಬೀಗ ಮುರಿದು ಅಲಮಾರಿಯಲ್ಲಿದ್ದ 7,500 ರೂ.ಮೌಲ್ಯದ 10 ತೊಲೆಯ ಬೆಳ್ಳಿ ಗಣಪತಿ ಮೂರ್ತಿ, 4 ಸಾವಿರ ರೂ.ಮೌಲ್ಯದ 5 ತೊಲೆಯ ಬೆಳ್ಳಿ ಕೈ ಕಡಗ, 25 ಸಾವಿರ ರೂ.ಮೌಲ್ಯದ ಅರ್ಧ ತೊಲೆ ಬಂಗಾರ, 5 ರೂ.ಚಿಲ್ಲರೆ ಹಾಕಿಟ್ಟಿದ್ದ 1000 ರೂಗಳ ಒಂದು ಡಬ್ಬಿ ಸೇರಿ 37,500 ರೂ.ಮೌಲ್ಯದ ವಸ್ತುಗಳನ್ನು ದೋಚಿಕೊಂಡು ಹೋಗಲಾಗಿದೆ.
ವಿಶ್ವನಾಥ ಮಠ ಮತ್ತವರ ಪತ್ನಿ ಮಗಳ ಆರೋಗ್ಯ ತಪಾಸಣೆಗೆಂದು ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿಗೆ ಹೋಗಿದ್ದಾಗ ಮನೆ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.