ಮನೆ ಬೀಗ ಮುರಿದು 1.15 ಲಕ್ಷ ರೂ.ಮೌಲ್ಯದ ಬಂಗಾರ, ಬೆಳ್ಳಿ ಆಭರಣ ಕಳವು

ಕಲಬುರಗಿ,ಜು.19-ಮನೆ ಬೀಗ ಮುರಿದು 1.15 ಲಕ್ಷ ರೂ.ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣ ದೋಚಿಕೊಂಡು ಹೋದ ಘಟನೆ ನಗರದ ಸಿಐಬಿ ಕಾಲೋನಿಯಲ್ಲಿ ನಡೆದಿದೆ.
ಸಬೀಹಾ ಅಬ್ದುಲ್ ಅಲೀಂ ಮಾಸೂಲದಾರ ಎಂಬುವವರ ಮನೆಯೇ ಕಳವಾಗಿದ್ದು, ಅವರು ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಸಬೀಹಾ ಅವರು ಸಿಐಬಿ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿದ್ದು, ಸೇಡಂ ಪಟ್ಟಣದಲ್ಲಿರುವ ತನ್ನ ಸಹೋದರಿ ಸಫೀಯಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಆರೋಗ್ಯ ವಿಚಾರಿಸಲು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದರು. ಈ ವೇಳೆ ಕಳ್ಳರು ಮನೆ ಬೀಗ ಮುರಿದು ಮನೆಯಲ್ಲಿದ್ದ 24 ಸಾವಿರ ರೂ.ಮೌಲ್ಯದ 6 ಗ್ರಾಂ.ನ ಎರಡು eತೆ ಬಂಗಾರದ ಕಿವಿಯೋಲೆ, 24 ಸಾವಿರ ರೂ.ಮೌಲ್ಯದ 3 ಗ್ರಾಂ.ನ ಎರಡು ಬಂಗಾರದ ಪೆಂಡೆಂಟ್‍ಗಳು, 16 ಸಾವಿರ ರೂ.ಮೌಲ್ಯದ 2 ಗ್ರಾಂ.ಬಂಗಾರದ ಎರಡು ಉಂಗುರ, 12 ಸಾವಿರ ರೂ.ಮೌಲ್ಯದ 1 ಗ್ರಾಂ.ಬಂಗಾರದ ಮೂರು ಉಂಗುರ, 24 ಸಾವಿರ ರೂ.ಮೌಲ್ಯದ 6 ಗ್ರಾಂ.ಬಂಗಾರದ ಬೋರಮಳ, 15 ಸಾವಿರ ರೂ.ಮೌಲ್ಯದ 360 ಗ್ರಾಂ.ಬೆಳ್ಳಿ ಆಭರಣ ಸೇರಿ 1.15 ಲಕ್ಷ ರೂ.ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣ ದೋಚಿಕೊಂಡು ಹೋಗಲಾಗಿದೆ.
ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.