ಮನೆ ಬೀಗ ಮುರಿದು ಬೆಳ್ಳಿ ಬಂಗಾರ, ನಗದು ಕಳುವು.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜ. 17 :- ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿದ ಯಾರೋ ಕಳ್ಳರು ಮನೆ ಬಾಗಿಲು ಮುರಿದು ಮನೆಯೊಳಗಿದ್ದ ಗಾಡ್ರೇಜ್ ನಲ್ಲಿನ 88ಸಾವಿರ ಮೌಲ್ಯದ ಬಂಗಾರ, ಬೆಳ್ಳಿ ಹಾಗೂ ನಗದು 15ಸಾವಿರ ಹಣವನ್ನು  ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ಪಟ್ಟಣದ ವಿದ್ಯಾನಗರದಲ್ಲಿ ಭಾನುವಾರ ರಾತ್ರಿ 10ಗಂಟೆಯಿಂದ ಸೋಮವಾರ ಬೆಳಿಗ್ಗೆ 6ಗಂಟೆಯ ಮಧ್ಯವಧಿಯಲ್ಲಿ ಜರುಗಿದೆ.
ಪಟ್ಟಣದ ಚಂದ್ರಮ್ಮ ಎನ್ನುವರರ ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ತಿಳಿದಿದ್ದು ಇವರು ತವರು ಮನೆಯಾದ ಗೌಡಗುಂಡನಹಳ್ಳಿಗೆ ಜಾತ್ರೆ ಇರುವುದರಿಂದ ಮನೆಯ ಬಾಗಿಲು ಹಾಕಿಕೊಂಡು ಹೋಗಿದ್ದು ಅದನ್ನು ಗಮನಿಸಿದ ಯಾರೋಕಳ್ಳರು ಮನೆಯ ಬಾಗಿಲ ಬೀಗ  ಮುರಿದು ಮನೆಯೊಳಗಿನ ಗಾಡ್ರೇಜ್ ಲಾಕರ್ ಮುರಿದು ಅದರಲ್ಲಿದ್ದ 88ಸಾವಿರ ರೂ  ಮೌಲ್ಯದ ಬಂಗಾರ, ಬೆಳ್ಳಿ ಆಭರಣಗಳನ್ನು ಹಾಗೂ 15ಸಾವಿರರೂ ನಗದು ಹಣ ಕಳುವು ಮಾಡಿಕೊಂಡು ಹೋಗಿದ್ದು ಅವರನ್ನ ಪತ್ತೆಮಾಡಿಕೊಡುವಂತೆ ಚಂದ್ರಮ್ಮ ನೀಡಿದ ದೂರಿನಂತೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.