ಕಲಬುರಗಿ,ಮೇ.29-ಮನೆ ಬೀಗ ಮುರಿದು 60,600 ರೂ.ಮೌಲ್ಯದ ನಗ-ನಾಣ್ಯ ಕಳ್ಳತನ ಮಾಡಿರುವ ಘಟನೆ ಕೋಟನೂರ (ಡಿ) ಗ್ರಾಮದಲ್ಲಿ ನಡೆದಿದೆ.
ವಿಜಯಲಕ್ಷ್ಮೀ ಶರಣಪ್ಪ ಸಿಂದಗಿ ಎಂಬುವವರ ಮನೆ ಬೀಗ ಮುರಿದು ಮನೆ ಕಳವು ಮಾಡಲಾಗಿದ್ದು, ಇವರು ಸಂಬಂಧಿಕರ ಮದುವೆ ಸಮಾರಂಭಕ್ಕೆಂದು ಅಫಜಲಪುರ ತಾಲ್ಲೂಕಿನ ಚೌಡಾಪುರಕ್ಕೆ ಹೋಗಿದ್ದಾಗ ಮನೆ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.