ಮನೆ ಬೀಗ ಮುರಿದು ಚಿನ್ನ ದೋಚಿ ಪರಾರಿಯಾದ ಕಳ್ಳರು

ಹರಿಹರ ಮೇ 28; ಹಾಡು ಹಗಲಲ್ಲೇ ಮನೆಯ ಬೀಗ ಮುರಿದು ನಗದು ಹಣ ಬಂಗಾರದ ಒಡವೆಗಳನ್ನು ದೋಚಿ ಪರಾರಿಯಾಗಿರುವ ಘಟನೆ ನಗರದ ಕುಂಬಾರ ಓಣಿ ಬಡಾವಣೆಯಲ್ಲಿ ನಡೆದಿದೆ  ಹರಿಹರೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಉದ್ಯೋಗಿ ರೇಖಾ ಮೇರವಾಡೆ ಇವರ ಮನೆಯಲ್ಲೇ ಮಧ್ಯಾಹ್ನದ ಸಮಯದಲ್ಲಿ  ಮನೆಯ ಬೀಗ ಮುರಿದು ಕಳ್ಳರು ಒಳ ಪ್ರವೇಶಿಸಿ ಗಾಡ್ರೇಜ್ ನಲ್ಲಿದ್ದ  ಬಂಗಾರ ಸೇರಿದಂತೆ   ಒಟ್ಟು 1.48 .ಸಾವಿರ ಬೆಲೆ ಬಾಳುವ ಒಡವೆಗಳನ್ನು ಕಳವು ಮಾಡಿದ್ದಾರೆ. ನಗರ ಠಾಣೆಯ ಪಿಎಸ್ ಐ ಸುನಿಲ್ ಬಸವರಾಜ ತೇಲಿ. ಅಪರಾಧ ವಿಭಾಗದ ಪಿಎಸ್ಸೈ ಲತಾ ತಾಳೇಕರ್ ಭೇಟಿ ನೀಡಿ ತಕ್ಷಣ ಶ್ವಾನದಳ ಬೆರಳಚ್ಚು ತಜ್ಞರನ್ನು  ಘಟನಾ ಸ್ಥಳಕ್ಕೆ ಕರಸಿಕೊಂಡು  ಚಾಲಾಕಿ ಕಳ್ಳರನ್ನು ಪತ್ತೆ ಮಾಡುವುದಕ್ಕೆ ಕಾರ್ಯಪ್ರವೃತ್ತರಾಗಿದ್ದಾರೆ  ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು ಮುಂದಿನ ತನಿಖೆ ಕೈಗೊಂಡಿರುತ್ತಾರೆ ಕಳ್ಳತನ ಪ್ರಕರಣದ ತನಿಖಾಧಿಕಾರಿ ಎಎಸ್ಸೈ ಯಾಸಿನ್ ಉಲ್ಲಾ .ಮಲ್ಲೇಶಪ್ಪ .ಪೋಲಿಸ್ ಅಧಿಕಾರಿಗಳಾದ ಸತೀಶ್ ಟಿ ವಿ.  ದೇವರಾಜ್. ಮಂಜುನಾಥ್. ಶಿವಪದ್ಮ.ದ್ವಾರಕೀಶ್ .ಹಾಗೂ ಅಪರಾಧ ವಿಭಾಗದ ಪೋಲಿಸ್ ಸಿಬ್ಬಂದಿ ವರ್ಗದವರು ಇದ್ದರು