ಮನೆ ಬೀಗ ಮುರಿದು ಕಳ್ಳತನ:ಇಬ್ಬರ ಬಂಧನ ಚಿನ್ನಾಭರಣ ಸೇರಿ 1.50 ಲಕ್ಷ ರೂ.ಮೌಲ್ಯದ ಸ್ವತ್ತು ವಶ

ಕಲಬುರಗಿ,ನ.27-ಮನೆ ಬೀಗ ಮುರಿದು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸ್ಟೇಷನ್ ಬಜಾರ್ ಪೊಲೀಸರು ಚಿನ್ನಾಭರಣ ಸೇರಿ 1.50 ಲಕ್ಷ ರೂ.ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.
ಡಬರಾಬಾದ್ ಕ್ರಾಸ್ ನ ಸೈಯದ್ ವಾಹೀದ್ ಅಲಿ ತಂದೆ ಬಾಬುಮೀಯಾ ಅತ್ತಾರ (24) ಮತ್ತು ಎಂ.ಎಸ್.ಕೆ.ಮಿಲ್ ಗಾಲೀಬ್ ಕಾಲೋನಿಯ ಮಹಮ್ಮದ್ ಸೊಹೆಲ್ ತಂದೆ ಮಹಮ್ಮದ್ ಇಲಿಯಾಸ್ ಖಾನ್ (20) ಬಂಧಿತ ಆರೋಪಿಗಳು.
ನಗರದ ಹಳೆ ಜೇವರ್ಗಿ ರಸ್ತೆಯ ಕೆಇಬಿ ಕ್ವಾಟರ್ಸನಲ್ಲಿರುವ ರೇವಣಸಿದ್ದಪ್ಪ ಹಂಗರಗಿ ಎಂಬುವವರ ಮನೆಯ ಹಿಂದಿನ ಬಾಗಿಲು ಮುರಿದು ಮನೆಯಲ್ಲಿಟ್ಟಿದ್ದ 40 ಸಾವಿರ ರೂಪಾಯಿ ಮೌಲ್ಯದ 10 ಗ್ರಾಂ. ಬಂಗಾರದ ಲಾಕೇಟ್, 20 ಸಾವಿರ ರೂಪಾಯಿ ಮೌಲ್ಯದ 6 ಗ್ರಾಂ.ಬಂಗಾರದ ಒಂದು ಜೊತೆ ಕಿವಿ ಜುಮಕಿ, 20 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಉಂಗುರ, 20 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಕಿವಿಯೋಲೆ, 50 ಸಾವಿರ ರೂ.ನಗದು ಹಣ, 2500 ರೂ.ಮೌಲ್ಯದ 30 ಗ್ರಾಂ.ಕಾಲು ಚೈನ್, 1500 ರೂ.ಮೌಲ್ಯದ 20 ಗ್ರಾಂ.ಬೆಳ್ಳಿಯ ಕುಂಕುಮ ಭರಣಿ, 3500 ರೂ.ಮೌಲ್ಯದ 50 ಗ್ರಾಂ.ಬೆಳ್ಳಿಯ ಸಮಯ, ಮನೆಯ ಹಾಲ್ ನಲ್ಲಿ ಇಟ್ಟಿದ್ದ 16000 ರೂ.ಮೌಲ್ಯದ 32 ಇಂಚಿನ ಸ್ಯಾಮಸಿಂಗ್ ಟಿ.ವಿ., ಸೇರಿದಂತೆ 1,73,500 ರೂ.ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಲಾಗಿತ್ತು.
ಇನ್ನೊಂದು ಪ್ರಕರಣದಲ್ಲಿ ನಗರದ ಹೊಸ ಜೇವರ್ಗಿ ರಸ್ತೆಯ ಕೋಠಾರಿ ಭವನ ಹಿಂಭಾಗದ ಮಹಾವೀರ ನಗರದಲ್ಲಿನ ಮನೆಯ ಬೀಗವನ್ನು ಕಬ್ಬಿಣದ ರಾಡ್ ನಿಂದ ಮೀಟಿ ತೆಗೆದು ಕಳ್ಳತನ ಮಾಡಲು ಯತ್ನಿಸಲಾಗಿತ್ತು.
ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಗರ ಪೊಲೀಸ್ ಆಯುಕ್ತ ವೈ.ಎಸ್.ರವಿಕುಮಾರ ಅವರ ನಿರ್ದೇಶನದ ಮೇರೆಗೆ ಉಪ ಪೊಲೀಸ್ ಆಯುಕ್ತ ಅಡ್ಡೂರು ಶ್ರೀನಿವಾಸಲು ಹಾಗೂ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ಶ್ರೀಕಾಂತ ಕಟ್ಟಿಮನಿ ಮಾರ್ಗದರ್ಶನದಲ್ಲಿ ಹಾಗೂ ಕಲಬುರಗಿ ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಅಂಶುಕುಮಾರ ಅವರ ನೇತೃತ್ವದಲ್ಲಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸಿದ್ದರಾಮೇಶ್ವರ ಗಡೇದ್, ಸಿಬ್ಬಂದಿಗಳಾದ ನಜ್ಜುಮೊದ್ದೀನ್, ದೇವೇಂದ್ರ, ಜಯಭೀಮ, ಮಲ್ಲಿಕಾರ್ಜುನ, ಫಿರೋಜ್, ಭೋಗೇಶ್, ಮೋಶಿನ್ ಅವರು ತನಿಖೆ ನಡೆಸಿ ಸೈಯದ್ ವಾಹೀದ್ ಅಲಿ ಮತ್ತು ಮಹಮ್ಮದ್ ಸೊಹೆಲ್ ಎಂಬುವವರನ್ನು ಬಂಧಿಸಿ 40 ಸಾವಿರ ರೂಪಾಯಿ ಮೌಲ್ಯದ 10 ಬಂಗಾರದ ಲಾಕೇಟ್, 20 ಸಾವಿರ ರೂ ಮೌಲ್ಯದ 6 ಗ್ರಾಂ.ಬಂಗಾರದ ಒಂದು ಜೊತೆ ಕಿವಿ ಜುಮಕಿ, 20 ಸಾವಿರ ರೂ.ಮೌಲ್ಯದ 5 ಗ್ರಾಂ. ಬಂಗಾರದ ಉಂಗುರ, 20 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಕಿವಿಯೋಲೆ, 2500 ರೂ.ಮೌಲ್ಯದ 30 ಗ್ರಾಂ.ಬೆಳ್ಳಿಯ ಕಾಲು ಚೈನ್, 1500 ರೂ.ಮೌಲ್ಯದ 20 ಗ್ರಾಂ.ಬೆಳ್ಳಿಯ ಕುಂಕುಮ ಭರಣಿ, 3500 ರೂ.ಮೌಲ್ಯದ 50 ಗ್ರಾಂ.ಬೆಳ್ಳಿಯ ಸಮಯ, 16000 ರೂ.ಮೌಲ್ಯದ 32 ಇಂಚಿನ ಸ್ಯಾಮ್ ಸಂಗ್ ಟಿ.ವಿ ಹಾಗೂ ಬ್ರಹ್ಮಪುರ ಪೊಲೀಸ್ ಠಾಣೆಗೆ ಸಂಬಂಧಿಸಿದ ಒಂದು ಹೋಂಡಾ ಎಕ್ಟಿವಾ ಬೈಕ್ ಸೇರಿ 1,50,000/- ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಿದ್ದಾರೆ.