ಮನೆ ಬಾಗಿಲು ಕೊಂಡಿ ಮುರಿದು 1.8 ಲಕ್ಷ ರೂ.ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಕಳವು

ಕಲಬುರಗಿ,ಫೆ.24-ಮನೆಯ ಬಾಗಿಲು ಕೊಂಡಿ ಮುರಿದು 1,08,000 ರೂ.ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ಕಳವು ಮಾಡಿಕೊಂಡು ಹೋಗಿರುವ ಘಟನೆ ಹಾಗರಗಾ ರಸ್ತೆಯ ಅರಾಫತ್ ಕಾಲೋನಿಯಲ್ಲಿ ನಡೆದಿದೆ.
ಮಹಮ್ಮದ್ ಇಸ್ಮಾಯಿಲ್ ಎಂಬುವವರ ಮನೆ ಬಾಗಿಲು ಕೊಂಡಿ ಮುರಿದು 25 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಕಿವಿಯಲ್ಲಿನ ರಿಂಗ್ಸ್, 75 ಸಾವಿರ ರೂ.ಮೌಲ್ಯದ 15 ಗ್ರಾಂ.ಬಂಗಾರದ ಉಂಗುರುಗಳು ಮತ್ತು 8 ಸಾವಿರ ರೂ.ಮೌಲ್ಯದ 16 ಗ್ರಾಂ.ಬೆಳ್ಳಿ ಕಾಲುಚೈನ್ ಸೇರಿ 1.8 ಲಕ್ಷ ರೂ.ಮೌಲ್ಯದ ¨ಂಗಾರ ಮತ್ತು ಬೆಳ್ಳಿ ಆಭರಣ ಕಳವು ಮಾಡಲಾಗಿದೆ.
ಮಹ್ಮದ್ ಇಸ್ಮಾಯಿಲ್ ಅವರು ಪತ್ನಿ ಮತ್ತು ತಂದೆ-ತಾಯಿ ಜೊತೆ ಮುಂಬೈಗೆ ಕಾರ್ಯಕ್ರಮಕ್ಕೆ ಹೋಗಿದ್ದ ವೇಳೆ ಕಳ್ಳರು ಮನೆ ಬಾಗಿಲು ಕೊಂಡಿ ಮುರಿದು ¨ಂಗಾರ ಮತ್ತು ಬೆಳ್ಳಿ ಆಭರಣ ದೋಚಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.