ಮನೆ ಬಾಗಿಲಿನ ಸೆಂಟ್ರಲ್ ಲಾಕ್ ಮುರಿದು 4.01 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು

ಕಲಬುರಗಿ,ಅ.7-ಮನೆಯ ಬಾಗಿಲಿನ ಸೆಂಟ್ರಲ್ ಲಾಕ್ ಮುರಿದು ಅಲಮಾರಾದಲ್ಲಿಟ್ಟಿದ್ದ 4,01,000 ರೂ.ಮೌಲ್ಯದ ನಗನಾಣ್ಯ ದೋಚಿಕೊಂಡು ಹೋಗಿರುವ ಘಟನೆ ಇಲ್ಲಿನ ಅಯೋಧ್ಯ ನಗರದಲ್ಲಿ ನಡೆದಿದೆ.
ಹಣಮಂತ ಭಜಂತ್ರಿ ಎಂಬುವವರ ಮನೆಯೇ ಕಳವಾಗಿದ್ದು, ಅವರು ಪತ್ನಿಯೊಂದಿಗೆ ಸಂಬಂಧಿಕರ ಮನೆಯಲ್ಲಿನ ಕಾರ್ಯಕ್ರಮಕ್ಕೆ ಹೋದ ವೇಳೆ ಕಳ್ಳತನ ನಡೆದಿದೆ ಎಂದು ತಿಳಿದುಬಂದಿದೆ.
ಮನೆಯ ಅಲಮಾರಾದಲ್ಲಿಟ್ಟಿದ್ದ 1.50 ಲಕ್ಷ ರೂ.ಮೌಲ್ಯದ 30 ಗ್ರಾಂ.ಬಂಗಾರದ 3 ಸುತ್ತುಂಗುರ, 1.50 ಲಕ್ಷ ರೂ.ಮೌಲ್ಯದ 30 ಗ್ರಾಂ.ಬಂಗಾರದ ಎರಡು ಎಳೆಯ ತಾಳಿ ಸರ, 6000 ರೂ.ಮೌಲ್ಯದ 100 ಗ್ರಾಂ.ಬೆಳ್ಳಿ ಕಾಲು ಚೈನಾ ಮತ್ತು ಮಕ್ಕಳ ಕಾಲ ಖಡಗ ಸೇರಿ 60 ಗ್ರಾಂ.ಬಂಗಾರ, 100 ಗ್ರಾಂ.ಬೆಳ್ಳಿ, ಮತ್ತು 95 ಸಾವಿರ ರೂ.ನಗದು ಸೇರಿದಂತೆ ಒಟ್ಟು 4.01 ಲಕ್ಷ ರೂ.ಮೌಲ್ಯದ ನಗನಾಣ್ಯವನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ.
ಈ ಸಂಬಂಧ ಹಣಮಂತ ಅವರ ಸಹೋದರ ರಾಜಕುಮಾರ ಭಜಂತ್ರಿ ಅವರು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.