ಮನೆ ಬಾಗಿಲಿಗೆ ಮತದಾನದ ವ್ಯವಸ್ಥೆ

ಜಗಳೂರು.ಮೇ.೨ : ಮನೆ ಬಾಗಿಲಿಗೆ ಮತದಾನದ ವ್ಯವಸ್ಥೆ ಕ್ಷೇತ್ರದಲ್ಲಿ ಉತ್ತಮವಾಗಿ ನಡೆದಿದೆ ಎಂದು ಚುನಾವಣಾಧಿಕಾರಿ ಎಸ್.ರವಿ. ಮಾಹಿತಿ ನೀಡಿದ್ದಾರೆ. 80 ವರ್ಷ ಮೇಲ್ಪಟ್ಟ ವೃದ್ದರಿಗೆ ಮತ್ತು ವಿಶಿಷ್ಟ ಚೇತನರಿಗೆ ಮನೆಯಲ್ಲಿಯೇ ಮತದಾನ ಮಾಡುವಂತ ವ್ಯವಸ್ಥೆಯನ್ನು ಚುನಾವಣಾ ಆಯೋಗ ಮಾಡಿದ್ದು  ಮತದಾನ ಪ್ರಕ್ರಿಯೆ ನಡೆದಿದೆ. ಕ್ಷೇತ್ರದಲ್ಲಿ 236 ಜನ ವೃದ್ದ ಮತ್ತು ವಿಶಿಷ್ಟ ಚೇತನ ಮತದಾರರಿದ್ದು 9 ಜನ ಮರಣ ಹೊಂದಿದ್ದು 4 ಜನ ಊರಲ್ಲಿ ಇಲ್ಲದೆ ಇರುವುದರಿಂದ 223 ಜನ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.