ಮನೆ ನುಗ್ಗಿ ಅಪ್ರಾಪ್ತ ಮಕ್ಕಳ ಮೇಲೆ ಹಲ್ಲೆ

ಮಹದೇವಪುರ.ಮಾ೩೦: ಕ್ಷುಲ್ಲಕ ಕಾರಣಕ್ಕೆ ಎರಡೂ ಸಮುದಾಯಗಳ ಮದ್ಯ ಜಗಳ ಸಂಭವಿಸಿ ಹಲ್ಲೆ ನಡೆದಿರುವ ಘಟನೆ ಕಾಡುಗುಡಿ ಪೋಲಿಸ್ ಠಾಣೆ ವ್ಯಾಪ್ತಿಯ ಎ.ಕೆ.ಜೆ.ಕಾಲೋನಿಯಲ್ಲಿ
ಜರುಗಿದೆ.
ಬೆಂಗಳೂರು ಪೂರ್ವ ತಾಲ್ಲೂಕು ಬಿದರಹಳ್ಳಿ ಹೋಬಳಿ ಎ.ಕೆ.ಜೆ.ಕಾಲೋನಿಯಲ್ಲಿ ಇತ್ತೀಚೆಗೆ ಪರಿಶಿಷ್ಟ ಜಾತಿಯ ಎಡ ಮತ್ತು ಬಲ ಕುಟುಂಬಗಳ ಮದ್ಯ ಕ್ಷುಲ್ಲಕ ಕಾರಣದಿಂದ ಜಗಳವಾಗಿ ಹಲ್ಲೆ ನಡೆದು ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.
ಎ.ಕೆ.ಜೆ.ಕಾಲೋನಿಯಲ್ಲಿ ಮೂಲದಿಂದಲೂ ಭಾಗ್ಯ ಮತ್ತು ಗಂಡ ಸರವಣ ಕುಟುಂಬ ವಾಸವಾಗಿದ್ದು ಅದೆ ಕಾಲೋನಿಯಲ್ಲಿ ಜೋಗಿ ಸೀನಾರವರ ಪತ್ನಿ ಲಕ್ಷಮ್ಮ ಅವರ ಕುಟುಂಬಗಳ ಮದ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಜೋಗಿ ಸೀನಾ ಕುಟುಂಬದವರೆಲ್ಲಾ ಏಕಾ ಏಕಿ ನಮ್ಮ ಯಜಮಾನರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಮನೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎಂದು ಭಾಗ್ಯ ಆರೋಪಿಸಿದ್ದಾರೆ.
ಘಟನೆಯಲ್ಲಿ ನೊಂದಿರುವ ಭಾಗ್ಯ ಕುಟುಂಬದ ವರು ವೈಟ್ ಫೀಲ್ಡ್ ನ ಖಾಸಗಿ ಹೋಟೆಲ್ ನಲ್ಲಿ ಆಯೋಜನೆ ಮಾಡಲಾಗಿದ್ದ ಪತ್ರಿಕಾ ಸಂದರ್ಶನದಲ್ಲಿ ಪಾಲ್ಗೊಂಡು ಮಾಹಿತಿ ನೀಡಿದರು. ಎ.ಕೆ.ಜೆ. ಕಾಲೋನಿಯ ವಾಸಿ ಜೋಗಿ ಸೀನಾರ ಪತ್ನಿ ಲಕ್ಷಮ್ಮ ಅವರ ಮಕ್ಕಳು ಒಟ್ಟಾಗಿ ಸೇರಿ ನಮ್ಮ ಮನೆಯಲ್ಲಿ ಯಜಮಾನರು ಇಲ್ಲದ ಸಮಯದಲ್ಲಿ ಅವಾಚ್ಚ ಶಬ್ದಗಳಿಂದ ನಿಂದಿಸಿ ದೊಣ್ಣೆ, ಕಲ್ಲು, ರಾಡುಗಳಿಂದ ನನ್ನ ಮತ್ತು ನನ್ನ ಚಿಕ್ಕ ಮಕ್ಕನಾದ ಗುಣಶೇಖರ್, ಆಕಾಶ್ ರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದರು.