
ಮಧುಗಿರಿ, ಮಾ. ೪- ಸ್ವಂತ ಮನೆ ನಿರ್ಮಾಣಕ್ಕೆಂದು ಶೇಖರಣೆ ಮಾಡಿಟ್ಟಿದ್ದ ಮರಳಿನ ಗುಡ್ಡೆಯನ್ನು ಕಂಡು ಅಧಿಕಾರಿಗಳು ಇದನ್ನು ಮಾರಾಟ ಮಾಡುವುದಕ್ಕೆ ಶೇಖರಿಸಿಕೊಂಡಿದ್ದಾರೆ ಎಂದು ಅನುಮಾನಗೊಂಡು ಅವರ ವಿರುದ್ಧ ಪ್ರಕರಣ ದಾಖಲಿಸಿರುವ ಘಟನೆ ಕಸಬಾ ವ್ಯಾಪ್ತಿಯ ಮಲ್ಲೆನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಈ ಬಗ್ಗೆ ಅ ಕುಟುಂಬದ ಮಹಿಳೆಯರು ಅಳಲು ತೊಡೆದುಕೊಂಡಿರುವ ಘಟನೆ ಗ್ರಾಮದಲ್ಲಿ ನಡೆದಿದೆ.
ಮಲ್ಲೇನಹಳ್ಳಿ ಗ್ರಾಮದಲ್ಲಿರುವ ಐದು ಮಂದಿ ಅಣ್ಣ-ತಮ್ಮಂದಿರ ಪೈಕಿ ಈಗಾಗಲೇ ಇಬ್ಬರು. ಮನೆ ನಿರ್ಮಿಸಿಕೊಂಡಿದ್ದು ಇನ್ನು ಮೂವರು ಮನೆ ನಿರ್ಮಾಣ ಮಾಡಲು ಪಾಯ ತೆಗೆದಿದ್ದು ಗೋಡೆ ನಿರ್ಮಿಸಬೇಕಾಗಿರುವುದರಿಂದ ಜಮೀನಿನಲ್ಲಿ ಮರಳನ್ನು ಶೇಖರಣೆ ಮಾಡಲಾಗಿದೆ ಹೊರತು ಮಾರಾಟಕ್ಕಲ್ಲ ಎಂದು ಹೇಳಿದರು.
ಮಲ್ಲೇನಹಳ್ಳಿ ಗ್ರಾಮದಲ್ಲಿರುವ ಮೂರು ಕುಂಟೆ ಜಮೀನಿನಲ್ಲಿ ಶ್ರೀನಿವಾಸ್ ಗೋವಿಂದಪ್ಪ, ಸ್‌ಗೋವಿಂದಪ್ಪ ವೆಂಕಟಸ್ವಾಮಿ ವೆಂಕಟೇಶ್‌ರಮೇಶ್‌ಅಣ್ಣ ತಮ್ಮಂದಿರುಗಳು.ವಿಭಾಗದ ಮೂಲಕ ಮನೆ ನಿರ್ಮಿಸಿಕೊಳ್ಳಲು ಪಾಯ ಹಂತದವರೆಗೂಕಟ್ಟಿದ್ದಾರೆ
ವೆಂಕಟಸ್ವಾಮಿ ಮತ್ತು ವೆಂಕಟೇಶ್ ಎಂಬವರು ಈಗಾಗಲೇ ಮನೆ ನಿರ್ಮಿಸಿಕೊಂಡಿದ್ದು ಶ್ರೀನಿವಾಸ್ ಗೋವಿಂದಪ್ಪ ಮತ್ತು ರಮೇಶ್ ಅವರುಗಳು ಮನೆ ನಿರ್ಮಿಸಿಕೊಳ್ಳಬೇಕಾಗಿದೆ
ಇವರುಗಳು ಗ್ರಾಮ ಪಂಚಾಯಿತಿ ವತಿಯಿಂದ ಮನೆ ನಿರ್ಮಾಣಕ್ಕಾಗಿ ವಸತಿ ಯೋಜನೆ ಹಣ ಬಿಡುಗಡೆಗಾಗಿ ಕಾಯುತ್ತಿದ್ದಾರೆ.
ಯುಗಾದಿ ಹಬ್ಬವಾದ ನಂತರ ಮನೆ ಕಟ್ಟಡ ಕಾಮಗಾರಿ ಪ್ರಾರಂಭಿಸಲು ಉದ್ದೇಶಿಸಿದ್ದು ಇದರ ಸಲುವಾಗಿ ಮನೆಯ ನಿರ್ಮಾಣದ ಪ್ರಯುಕ್ತ ಮರಳನ್ನು ಶೇಖರಣೆ ಮಾಡಿ ಇಟ್ಟಿದ್ದಾರೆ.
ಕೆಲವರು ಇದನ್ನು ತಪ್ಪು ಗ್ರಹಿಸಿಕೊಂಡು ಮಾರಾಟ ಮಾಡಲು ಶೇಖರಿಸಿದ್ದಾರೆ ಎಂದು ತಹಶೀಲ್ದಾರ್ ಮತ್ತು ಪೊಲೀಸ್ ಇಲಾಖೆ ಮತ್ತು ಗಣಿ ಭೂ ವಿಜ್ಞಾನಕ್ಕೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿರುವರು ಸರಿಯೇ ಎಂದು ಗೃಹಣಿಯರು ಆರೋಪಿಸಿದರು.
ಈ ಮರಳನ್ನು ನಾವು ಕಳೆದ ೨೦ ದಿನಗಳ ಹಿಂದೆ ಶೇಖರಣೆ ಮಾಡಲಾಗಿದೆ. ಮಾರಾಟ ಮಾಡುವುದಾದರೆ ಅಂದಿನ ರಾತ್ರಿಯ ಲಾರಿಗೆ ತುಂಬಿ ಕಳುಹಿಸುತ್ತಿದ್ದೇವು. ನಾವು ಮನೆ ನಿರ್ಮಾಣಕ್ಕಾಗಿ ಪ್ರಾಮಾಣಿಕವಾಗಿ ಶೇಖರಣೆ ಮಾಡಿದ್ದೇವೆ ಹೊರತು ಯಾವುದೇ ಮಾರಾಟಕ್ಕಲ್ಲ ಎಂದು ಸಮಸ್ಯೆ ಬಗ್ಗೆ ತಿಳಿಸಿದರು.