ಮನೆ ದೇವಾಲಯಕ್ಕಿಂತ ಪವಿತ್ರವಿದ್ದರೆ ಮಹಾತ್ಮರು ಸಂತರು ಜನಿಸುವರು: ಪೂಜ್ಯ ಶ್ರೀ ಗುರುಬಸವ ಪಟ್ಟದೇವರು

ಭಾಲ್ಕಿ: ಫೆ.27: ಮನೆಗೊಂದು ಅನುಭವ ಮಂಟಪದ 41ನೇ ದಿವಸ ಕಾವೇರಿ ಬಸವರಾಜ ಗೋರನಾಳೆ ಶರಣ ನಗರ ಅಗ್ನಿಶಾಮ ಗಂಜ್ ಭಾಲ್ಕಿ ಅವರ ಮನೆಯಲ್ಲಿ ಕಾರ್ಯಕ್ರಮ ನೆರವೇರಿತು. ಪೂಜ್ಯಶ್ರೀ ಗುರುಬಸವ ಪಟ್ಟದೇವರು ಸಾನಿಧ್ಯ ವಹಿಸಿ ಮನೆ ಮಹಾಮನೆ ಆಗಬೇಕೆಂದು ಹೇಳಿದರು. ಮನೆ ದೇವಾಲಯಕ್ಕಿಂತ ಪವಿತ್ರವಿದ್ದರೆ ಮಹಾತ್ಮರು ಸಂತರು ಜನಿಸುವರು. ಮನೆ ಬಂಧ ಸಂಬಂಧ ಅನುಬಂಧವನ್ನು ರೂಪಿಸುವಂತಹ ಮನೆಯೇ ಮಹಾಮನೆ ಎಂದರು.
ಶ್ರೀ ಅಪ್ಪರಾವ ಸವದಿ ಕನ್ನಡಪ್ರಭ ಜಿಲ್ಲಾ ವರದಿಗಾರರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಶ್ರೀ ಎಂ ವಿ ಗಿರೀಶ್ ಅವರು ಮನೆ ಹೇಗಿರಬೇಕು ಎಂಬುದರ ಕುರಿತು ಮಾತನಾಡಿದರು. ಮನೆ ಒಬ್ಬ ವ್ಯಕ್ತಿಯ ಜೀವನಕ್ಕೆ ತುಂಬಾ ಅವಶ್ಯಕವಾದ ವಸ್ತುಗಳಲ್ಲಿ ಒಂದು. ಮನೆ ಎಂದಾಕ್ಷಣ ನಮಗೆ ನೆಮ್ಮದಿ ಸಿಗುವುದು ಕೆಲಸ ಮುಗಿಸಿ ಮನೆಗೆ ಬಂದರೆ ಸಾಕಪ್ಪಾ ಎನ್ನುವಂತೆ, ಮನೆ ನೆಮ್ಮದಿ ಸಿಗುವ ತಾಣ. ಮನೆಯೂ ಒಬ್ಬ ವ್ಯಕ್ತಿಯ ಜೀವನದಲ್ಲಿ ಅಷ್ಟೊಂದು ಮಹತ್ವದ ಸ್ಥಾನ ಪಡೆದಿದೆ. ಮನೆ ಅದು ಬಾಡಿಗೆಯ ಮನೆ, ಸ್ವಂತ ಮನೆ, ಅರಮನೆ, ಗುಡಿಸಲು ಮನೆ, ಚಪ್ಪರದ ಮನೆ, ಇಟ್ಟಿಗೆಯ ಮನೆ, ಹೆಂಚಿನ ಮನೆ, ನನ್ನ ಮನೆ, ತಂದೆಯ ಮನೆ, ಅಜ್ಜಿಯ ಮನೆ, ಅತ್ತೆ ಮನೆ ಹೀಗೆ ಅನೇಕ ವಿಧಗಳಲ್ಲಿ ನಾವು ಮನೆಯನ್ನು ಸೂಚಿಸುತ್ತೇವೆ. ಮನೆ ಬಂಧ ಸಂಬಂಧ ಅನುಬಂಧವನ್ನು ರೂಪಿಸುವಂತದ್ದು. ಶರಣರು ಹೇಳಿದಂತೆ ಯಾವ ಮನೆಯಲ್ಲಿ ಅನುಭಾವ ಗೋಷ್ಠಿ ನಡೆಯುವುದೋ ಯಾವ ಮನೆಯಲ್ಲಿ ಸುವಿಚಾರಗಳನ್ನು ಎಲ್ಲರಿಗೂ ಉಣಬಡಿಸಲಾಗುವುದೋ ಅದುವೇ ಮಹಾಮನೆ. ಅದಕ್ಕೆ ಹಿರಿಕರು ಹೇಳಿದ್ದಾರೆ ಮನೆಯ ಮಂತ್ರಾಲಯ ಮನಸೇ ದೇವಾಲಯ. ಮನೆ ಮಂತ್ರಾಲಯ ರಾಯರ ಕ್ಷೇತ್ರ ವಾಗಬೇಕಾದರೆ ಮನೆಯಲ್ಲಿ ಪ್ರೀತಿ ವಿಶ್ವಾಸದಿಂದ ಬಾಳಬೇಕು ಅಲ್ಲಿ ಓಡೆಯನಿರಬೇಕು, ಮನೆಯಲ್ಲಿ ಜ್ಯೋತಿ ಬೇಳಗುತ್ತಿರಬೇಕು. ಇದೆಲ್ಲವೂ ಹೇಗೆ ಸಾಧ್ಯ ಎಂದರೆ ನಾವು ಇಂತಹ ಸತ್ಸಂಗ ಸತ್ಯವಂತರ ಶರಣರ ಸಂಗಸೇರಿ ಗುರು ಬಸವಣ್ಣ ನವರ ವಚನಗಳನ್ನು ಆಲಿಸುತ್ತಾ ಪಾಲಿಸುತ್ತಾ ಬದುಕಿದರೆ ಸಾಧ್ಯ ಎಂದು ಹೇಳಿದರು.
ಶ್ರೀ ಧನರಾಜ ವಾಲೆ ದಾಡಗಿ ಅವರು ಬಸವ ಪ್ರಾರ್ಥನೆಯನ್ನು ನೆರವೇರಿಸಿದರು. ಲಕ್ಷ್ಮೀಬಾಯಿ ಕಾಶಪ್ಪ ನೀಡೋದೆ ಪರಿವಾರದಿಂದ ಗುರು ಬಸವ ಪೂಜೆ ನೆರವೇರಿತು. ಶ್ರೀದೇವಿ ಶಾಂತಯ್ಯ ಸ್ವಾಮಿಯವರು ತತ್ವಪದ ಗಾಯನ ಮಾಡಿದರು. ಪೂಜ್ಯಶ್ರೀ ಗುರುಬಸವ ಪಟ್ಟದೇವರು ಗೊರನಾಳೆ ಪರಿವಾರದವರನ್ನು ಆಶೀರ್ವದಿಸಿದರು. ಅಪ್ಪಾರಾವ್ ಸೌದಿ, ಚಂದ್ರಕಲಾ ಪ್ರಭು ಡಿಗ್ಗೆ, ಶ್ರೀದೇವಿ ಶಾಂತಯ್ಯ ಸ್ವಾಮಿ, ಧನರಾಜ ವಾಲೆ, ಬಸವರಾಜ್ ಮರೆ, ಹಾಗೂ ಅನೇಕರನ್ನು ಗೌರವ ಸನ್ಮಾನ ಮಾಡಲಾಯಿತು. ಜೈಪ್ರಕಾಶ್ ಕುಂಬಾರ, ವೀರಣ್ಣ ಕುಂಬಾರ್, ಸುರೇಶ್ ಪುರಂತ, ರಾಜಕುಮಾರ ಬಚಣ್ಣ ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಭು ಡಿಗ್ಗೆ ಶಿಕ್ಷಕರು ಕಾರ್ಯಕ್ರಮ ನಿರೂಪಿಸಿದರು. ಮಂಗಲ ಹಾಗೂ ಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು ಎಂದು ಶ್ರೀ ಶಾಂತಯ್ಯ ಸ್ವಾಮಿ ತಿಳಿಸಿದರು.