
ನವದೆಹಲಿ,ಮಾ.೧೮- ಭ್ರಷ್ಟಷಾರ ಆರೋಪ ಪ್ರಕರಣದಲ್ಲಿ ಜೈಲು ಪಾಲಾಗಿರುವ ದೆಹಲಿಯ ಮಾಜಿ ಸಚಿವರಾದ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅವರಿಗೆ ಈ ತಿಂಗಳ ೨೧ರ ಒಳಗೆ ಮನೆ ಖಾಲಿ ಮಾಡಿ ಎಂದು ಲೋಕೋಪಯೋಗಿ ಇಲಾಖೆ ನೋಟಿಸ್ ಜಾರಿ ಮಾಡಿದೆ.
ದೆಹಲಿ ಆಮ್ ಆದ್ಮಿ ಸರ್ಕಾರದ ನೂತನ ಸಚಿವರಾಗಿರುವ ಅತಿಶಿ ಮತ್ತು ಸೌರಭ್ ಭಾರದ್ವಜ್ ಅವರಿಗೆ ಮನೆ ಹಂಚಿಕೆ ಮಾಡಬೇಕಾಗಿದೆ.ಈ ಹಿನ್ನೆಲೆಯಲ್ಲಿ ಮನೆ ಖಾಲಿ ಮಾಡಿ ಎಂದಯ ಇಲಾಖೆ ಸೂಚಿಸಿದೆ.
ಈ ತಿಂಗಳ ಮಾರ್ಚ್ ೨೧ ರೊಳಗೆ ಮನೆ ಖಾಲಿ ಮಾಡಿ ಎಂದು ಮಾರ್ಚ್ ೧೪ ರಂದು ಹೊರಡಿಸಿದ ಆದೇಶ ಪತ್ರದಲ್ಲಿ ತಿಳಿಸಲಾಗಿದೆ.
ಸಿಸೋಡಿಯಾ ಅವರಿಗೆ ಮಥುರಾ ರಸ್ತೆಯಲ್ಲಿರುವ ಬಂಗಲೆ ಸಂಖ್ಯೆ ಎಬಿ-೧೭ ಅನ್ನು ಮಂಜೂರು ಮಾಡಿದ್ದರೆ, ಸತ್ಯೇಂದ್ರ ಜೈನ್ ಅವರಿಗೆ ಸಿವಿಲ್ ಲೈನ್ಸ್‌ನಲ್ಲಿರುವ ರಾಜ್ ನಿವಾಸ್ ಮಾರ್ಗ್, ೮ ರ ಬಂಗಲೆ ಸಂಖ್ಯೆ ೨ ರಲ್ಲಿ ವಾಸಿಸುತ್ತಿದ್ದರು
ಹೊಸದಾಗಿ ನೇಮಕಗೊಂಡ ಸಚಿವರಿಗೆ ಅಧಿಕೃತ ನಿವಾಸಗಳನ್ನು ನೀಡಲಾಗಿದೆ, ಅವರು ಒಪ್ಪಿಕೊಂಡ ನಂತರ ಹಂಚಿಕೆ ಪತ್ರಗಳನ್ನು ನೀಡಲಾಗುವುದು” ಎಂದು ಪಿಡಬ್ಲ್ಯುಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೆಹಲಿ ಸರ್ಕಾರದ ಮೂಲಗಳ ಪ್ರಕಾರ, ಸಿಸೋಡಿಯಾ ಮತ್ತು ಜೈನ್ ಅವರ ಕುಟುಂಬಗಳು ಹೊಸ ಸಚಿವರ ಪ್ರಮಾಣವಚನ ಸ್ವೀಕಾರ ನಂತರವೂ ಅಸ್ತಿತ್ವದಲ್ಲಿರುವ ನಿವಾಸಗಳಲ್ಲಿ ವಾಸಿಸುತ್ತಿದ್ದಾರೆ.ಹೀಗಾಗಿ ಮನೆ ಖಾಲಿ ಮಾಡಲು ನೋಟೀಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ೧೫ ದಿನಗಳಲ್ಲಿ ಸರ್ಕಾರಿ ನಿವಾಸವನ್ನು ಖಾಲಿ ಮಾಡಬೇಕು ಎನ್ನುವ ನಿಯಮವಿದೆ. ಕಾನೂನು, ಈ ಆದೇಶ ಕಾನೂನು ಪ್ರಕಾರ ಈನೋಟಿಸ್ ಜಾರಿ ಮಾಡಲಾಗಿದೆ ಎಂದಿದ್ದಾರೆ.
ಕಳೆದ ತಿಂಗಳು ಸಿಬಿಐ ಆರೋಪದ ಹಿನ್ನೆಲೆಯಲ್ಲಿ ಸಿಸೋಡಿಯಾ ತಿಹಾರ್ ಜೈಲು ಪಾಲಾಗಿದ್ದಾರೆ.
ಈ ತಿಂಗಳ ಆರಂಭದಲ್ಲಿ ಇಬ್ಬರೂ ತಮ್ಮ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು.
ಪಿಡಬ್ಲ್ಯೂಡಿ ಸೇರಿದಂತೆ ಸಿಸೋಡಿಯಾ ಅವರು ಹೊಂದಿದ್ದ ಪ್ರಮುಖ ಖಾತೆಗಳ ಉಸ್ತುವಾರಿಯನ್ನು ಅತಿಶಿ ವಹಿಸಿಕೊಂಡಿದ್ದಾರೆ.
ಇಂಧನ ಮತ್ತು ಶಿಕ್ಷಣ, ನಗರಾಭಿವೃದ್ಧಿ, ನೀರು ಮತ್ತಿತರ ಪ್ರಮುಖ ಖಾತೆಗಳನ್ನು ಭಾರದ್ವಾಜ್ ಅವರಿಗೆ ನೀಡಲಾಗಿದೆ.