ಮನೆ ಗೋಡೆ ಬಿದ್ದು ಬಾಲಕ ಸಾವು

ಚನ್ನಮ್ಮನ ಕಿತ್ತೂರ.ಜು.17: ನಿರಂತರ ಮಳೆಯಿಂದಾಗಿ ಸಮೀಪದ ಚುಂಚವಾಡ ಗ್ರಾಮದಲ್ಲಿ ಮನೆ ಗೋಡೆ ಬಿದ್ದು ಬಾಲಕನೋರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಅನಂತರಾಜ ಧರಣೇಂದ್ರ ಪಾಶೆಟ್ಟಿ (15) ಎಂದಿನಂತೆ ಜಾನುವಾರುಗಳಿಗೆ ಮೇವು ಹಾಕಲು ಹೋದಾಗ ಹಳೆಯ ಗೋಡೆ ಕುಸಿದು ಮಣ್ಣಿನಲ್ಲಿ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಆ ಬಾಲಕನ ಕುಟುಂಬಕ್ಕೆ ಉದ್ಯಮಿ ಮತ್ತು ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ನಾಸೀರ ಬಾಗವಾನ ಭೇಟಿ ನೀಡಿ ಸಾಂತ್ವನ ಹೇಳಿದರು.
ತಾಲೂಕಾ ಮತ್ತು ಜಿಲ್ಲಾ ಮಟ್ಟದ ಆಧಿಕಾರಿಗಳ ಜೊತೆಗೂಡಿ ಚರ್ಚಿಸಿ ನಿಮಗೆ ಸರ್ಕಾರದ ಸೌಲಭ್ಯ ದೊರಕಿಸಿ ಕೊಡಲಾಗುವುದು. ಕ್ಷೇತ್ರದಲ್ಲಿ ಇಂತಹ ಘಟನೆ ಸಂಭವಿಸಿದ್ದಲ್ಲಿ ನನ್ನ ಗಮನಕ್ಕೆ ಬಂದರೆ ನಾನು ಅವರ ಸೇವೆಗೆ ಸದಾ ಸಿದ್ದನಿದ್ದೇನೆಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯರಾದ ಎಂ.ಎಂ. ಸಾಹುಕಾರ, ಕುಟುಂಬಸ್ಥರು, ಕಾರ್ಯಕರ್ತರಿದ್ದರು.