ಮನೆ ಗೆದ್ದ ಮಾನವತಿ ಅರ್ಥಾತ್ ಸತ್ಯ ಸತ್ತಿಲ್ಲ ಕೌಟುಂಬಿಕ ನಾಟಕ ಲೋಕಾರ್ಪಣೆ

ಕಲಬುರಗಿ,ಮೇ.20: ರಂಗಾಯಣದಲ್ಲಿ ಶನಿವಾರ ಹಿರಿಯ ಮಕ್ಕಳ ಸಾಹಿತಿ ಎ. ಕೆ. ರಾಮೇಶ್ವರ, ಡಾ. ಸ್ವಾಮಿರಾವ ಕುಲಕರ್ಣಿ, ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಬಸವರಾಜ ಕೊನೇಕ, ಮಹಿಪಾಲ್ ರೆಡ್ಡಿ ಮೂನ್ನುರ, ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ಅರಣಕಲ್ ದಿವಾಕರ್. ಎಸ್ .ಜೋಶಿ ಅವರು ರಚಿಸಿದ ಮನೆ ಗೆದ್ದ ಮಾನವತಿ ಅರ್ಥಾತ್ ಸತ್ಯ ಸತ್ತಿಲ್ಲ ಎಂಬ ಕೌಟುಂಬಿಕ ನಾಟಕ ಪುಸ್ತಕ ಲೋಕಾರ್ಪಣೆ ಮಾಡಿದರು. ನಾರಾಯಣ ಎಂ ಜೋಶಿ, ಎಂ ಸಂಜೀವ, ನಯನಾ, ಮೋಹನ ಸೀತನೂರ, ಬಾಬುರಾವ ಹೆಚ್, ನಗರದ ರಂಗಕಲಾವಿದರು, ಸಾಹಿತಿಗಳು ರಂಗಆಸಕ್ತರು ಮುಂತಾದವರು ಇದ್ದರು.