ಮನೆ ಖಾಲಿ ಮಾಡಿಎನ್ನುತ್ತಿರುವ ಅತ್ತೆ: ದಯಾ ಮರಣಕ್ಕೆ ಮಗ-ಸೊಸೆ ಅರ್ಜಿ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.06- ಪ್ರೀತಿಸಿ ಮದುವೆಯಾಗಿದ್ದೇ ಈ ದಂಪತಿಗಳ ಬಾಳಿಗೆ ಮುಳ್ಳಾಗಿ ಪರಿಣಮಿಸಿದ್ದು ಗಂಡನ ಮನೆಯವರು ನಿರಂತರ ಕಿರುಕುಳ ಕೊಡುತ್ತಿದ್ದಾರೆಂದುಗಂಡ-ಹೆಂಡತಿದಯಾಮರಣಕ್ಕೆಅರ್ಜಿ ಹಾಕಿದ್ದಾರೆ.
ಹೌದು, ಕೊಳ್ಳೇಗಾಲ ತಾಲ್ಲೂಕು ಜಕ್ಕಳ್ಳಿ ಗ್ರಾಮದ ಲ್ಯಾನ್ಸಿ ಲೀನಾ ಹಾಗು ಅರುಳ್ ಸೆಲ್ವ ಎಂಬ ದಂಪತಿದಯಾಮರಣಕ್ಕೆಜಿಲ್ಲಾಧಿಕಾರಿಗೆಅರ್ಜಿ ಸಲ್ಲಿಸಿ, ಕಿರುಕುಳ ತಪ್ಪಿಸಿಕೊಳ್ಳಲು ತಮಗೆ ಸಾವೇ ಪರಿಹಾರಎಂದು ಅಳಲು ತೋಡಿಕೊಂಡಿದ್ದಾರೆ.
ಏನಿದು ಕಹಾನಿ:
ಲ್ಯಾನ್ಸಿ ಲೀನಾ ಹಾಗು ಅರುಳ್ ಸೆಲ್ವ ಕಳೆದ 5 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು 2 ಮಕ್ಕಳಿವೆ. ಅತ್ತೆ ಮೋಕ್ಷಾರಾಣಿಅವರಜಾಗದಲ್ಲಿ ಅವರ ಅನುಮತಿ ಪಡೆದುಲ್ಯಾನ್ಸಿ ಲೀನಾ ಸಾಲ ಮಾಡಿ ಮನೆಯನ್ನು ಕಟ್ಟಿಕೊಂಡಿದ್ದಾರೆ. ಈಗ, ಅತ್ತೆ ಮೋಕ್ಷರಾಣಿ ಮನೆ ಖಾಲಿ ಮಾಡುವಂತೆ ಪೆÇಲೀಸರಿಗೆ ದೂರು ಕೊಟ್ಟಿದ್ದು ಸೆ.10 ರ ಒಳಗಾಗಿ ಮನೆ ಖಾಲಿ ಮಾಡುವಂತೆ ಪೆÇಲೀಸರು ಹೇಳಿದ್ದಾರೆ.