ಮನೆ ಕುಸಿತ ಸಾಂತ್ವನ ಹೇಳಿದ ಖಂಡ್ರೆ

ಭಾಲ್ಕಿ :ಜು.31:ಕಳೆದ ಹಲವು ದಿನಗಳಿಂದ ಭಾಲ್ಕಿ ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ
ಮನೆ ಕುಸಿದು ಸಾಕಷ್ಟು ಹಾನಿಯಾಗಿತ್ತು. ಈ ಹಿನ್ನೆಲೆಯಲ್ಲಿ ಭಾಲ್ಕಿ ಜನಪ್ರಿಯ ಶಾಸಕರು ಹಾಗೂ
ಕೆಪಿಸಿಸಿ ಕಾರ್ಯಾಧ್ಯಕ್ಷರು ಈಶ್ವರ ಖಂಡ್ರೆ ಅವರು ಪಟ್ಟಣದಲ್ಲಿ ಮಳೆಯಿಂದ ಹಾನಿಗೊಳಗಾದ ನಿವಾಸದಲ್ಲಿರುವ ಸುಭದ್ರಾಬಾಯಿ ಬಳಿರಾಮ್, ಶರಣಮ್ಮ ನಾಗಾನಾಥ, ನಾಗಮ್ಮ ಬಸವರಾಜ್, ಬುದ್ಧರಾಜ್ ಪ್ರಭಾಕರ್, ರುಪಾಬಾಯಿ, ಕಲ್ಯಾಣರಾವ್ ಶಿವರಾಮ್, ಅನಿತಾ ಸಂತೋಷ್, ಸರೂಬಾಯಿ ಬಾಬುರಾವ್, ಶೇಷೇರಾವ್ ಸುಭಾಶರಾವ್ ರವರ ಮನೆಗಳಿಗೆ ಭೇಟಿ ನೀಡಿ ಪರಿಹಾರದ ಚೆಕ್ ಗಳನ್ನು ವಿತರಿಸಿ ನಿಮ್ಮೊಂದಿಗೆ ನಾನಿದ್ದೀನಿ ಯಾರು ಧೈರ್ಯ ಕಳೆದುಕೊಳ್ಳಬೇಡಿ ಎಂದು ಸಾಂತ್ವನ ಹೇಳಿದರು.