ಮನೆ ಕುಸಿತ ಪ್ರಾಣಾಪಾಯದಿಂದ ಪಾರಾದ ಕುಟುಂಬ

ಸೇಡಂ ಜು,22: ತಾಲೂಕಿನಾದ್ಯಂತ ಒಂದು ವಾರಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ನಿನ್ನೆ ರಾತ್ರಿ 12 ಗಂಟೆಗೆ ಕುಕ್ಕುಂದಾ ಗ್ರಾಮದ ರಮೇಶ್ ಕುಮಾರ ಮಠಪತಿ ಅವರ ಮನೆಯ ಗೋಡೆ ಕುಸಿದು ಬಿದ್ದು ಮನೆಯಲ್ಲಿದ್ದ ಟಿವಿ ,ಫ್ರಿಡ್ಜ್, ಟೈಲರ್ ಮಷೀನ್, ಫ್ಯಾನ್ ಹಾಗೂ ಮನೆ ಒಳಗಿನ ಸಾಮಾಗ್ರಿಗಳು ಸೇರಿದಂತೆ ಸಾವಿರ ರೂಪಾಯಿ ಹಾನಿಯಾಗಿದ್ದು ಮನೆ ಒಳಗೆ ಮಲಗಿದ್ದ ದಂಪತಿ 3 ಮಕ್ಕಳು ಪ್ರಣಾಪಾಯದಿಂದ ಪಾರಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾನಿಯದವ ಮನೆಗೆ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ಕಲ್ಪಿಸಬೇಕಾಗಿದೆ. ಮಳೆಯಿಂದ ಮನೆ ಕುಸಿತದಿಂದ ಕುಟುಂಬವರು ಪ್ರಾಣಾಪಾಯದಿಂದ ಪಾರಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಅವರಿಗೆ ಒಂದು ಮನೆಯ ನಿರ್ಮಾಣಕ್ಕೆ ಪರಿಹಾರ ದೊರಕಿಸಿ ಕೊಡಬೇಕು ಎಂದು ಗ್ರಾಮದ ಯುವಕರಾದ ಜಗದೀಶ್ ಒತ್ತಾಯಿಸುತ್ತಾರೆ.