ಮನೆ ಕುಸಿತ: ಪರಿಹಾರ ವಿತರಣೆ

ಹುಮನಾಬಾದ್: ಜು.26:ತಾಲ್ಲೂಕಿನ ಘಾಟಬೋರಾಳ್ ಹಾಗೂ ಕನಕಟ್ ಗ್ರಾಮಗಳಲ್ಲಿ ಮಳೆಯಿಂದಾಗಿ ಶುಕ್ರವಾರ ತಲಾ 3 ಮನೆಗಳು ಕುಸಿದಿವೆ.

ಶಾಸಕ ರಾಜಶೇಖರ ಬಿ.ಪಾಟೀಲ ಅವರು ಭಾನುವಾರ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ ತಾತ್ಕಾಲಿಕ ಪರಿಹಾರದ ಚೆಕ್ ವಿತರಿಸಿದರು.

ತಹಶೀಲ್ದಾರ್ ಡಾ.ಪ್ರದೀಪಕುಮಾರ ಹಿರೇಮಠ, ಶಿವಕುಮಾರ ಶಂಕರಶೇಟ್ಟಿ, ಗುರುನಾಥ ಶಂಕರಶೇಟ್ಟಿ, ಕೇಶಪ್ಪ ಬಿರಾದಾರ, ಅಮರ, ಲಿಂಗರಾಜ ಪಾಟೀಲ, ಪ್ರಕಾಶ ಕಾಡಗೊಂಡ, ಉಮೇಶ ಜಮಗಿ, ರಂಜಿತ್ ಮಾನಕರ, ಜ್ಞಾನೇಶ್ವರ ಭೋಸ್ಲೆ, ವಿಷ್ಣು ಜಮಾದಾರ, ಶಿವಾಜಿ ರಘು ಹಾಗೂ ಕೀಶನ ನಾಯಕ್ ಇದ್ದರು