ಬೀದರ್,ಜೂ.15-ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀದರ್ ತಾಲ್ಲೂಕಿನ ಔರಾದ್ (ಎಸ್) ಗ್ರಾಮದ ಸುನೀಲ ಪವಾರ್ ಎಂಬಾತನನ್ನು ಪೊಲೀಸರು ಬಂಧಿಸಿ 6,65000 ರೂ.ಮೌಲ್ಯದ 118 ಗ್ರಾಂ.ಬಂಗಾರದ ಆಭರಣ,60 ಸಾವಿರ ರೂ.ಮೌಲ್ಯದ 12.5 ಗ್ರಾಂ.ಬೆಳ್ಳಿ ಆಭರಣ ಹಾಗೂ 1.97 ಲಕ್ಷ ರೂ.ನಗದು ಹಣ ಸೇರಿ 9.22 ಲಕ್ಷ ರೂ.ಮೌಲ್ಯದ ನಗನಾಣ್ಯ ಜಪ್ತಿ ಮಾಡಿದ್ದಾರೆ.
ಬಗದಲ್ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಔರಾದ (ಎಸ್) ಗ್ರಾಮದ ಜಗದೇವಿ ಅರ್ಜುನ ಚಿನಕೇರೆ ರವರ ಮನೆಯಲ್ಲಿ ಅಲ್ಮಾರಿಯಲ್ಲಿ ಇಟ್ಟಿದ್ದ ಒಟ್ಟು 6,65,000/- ರೂ ಮೌಲ್ಯದ 118 ಗ್ರಾಂ ಬಂಗಾರದ ಆಭರಣಗಳು, 60,000/- ರೂ ಮೌಲ್ಯದ 12.5 ಗ್ರಾಂ ಬೆಳ್ಳಿ ಆಭರಣಗಳು ಹಾಗೂ 3,04000/- ರೂ ನಗದು ಹಣ ಹೀಗೆ ಒಟ್ಟು 10,29000/- ರೂ.ಮೌಲ್ಯದು ಕಳ್ಳÀತನವಾದ ಬಗ್ಗೆ ಬಗದಲ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ತನಿಖೆ ನಡೆಸಲು ಎಸ್.ಪಿ.ಚನ್ನಬಸವಣ್ಣ ಎಸ್.ಎಲ್., ಹೆಚ್ಚುವರಿ ಎಸ್ಪಿ ಮಹೇಶ ಮೇಘಣವರ, ಉಪಾಧೀಕ್ಷಕ ಕೆ.ಎಂ.ಸತೀಶ ರವರ ಮಾರ್ಗದರ್ಶನದಲ್ಲಿ ಸಿಪಿಐ ಶ್ರೀನಿವಾಸ ವಿ. ಅಲ್ಲಾಪೂರ ಅವರ ನೇತೃತ್ವದಲ್ಲಿ ಬಗದಲ್ ಪೊಲೀಸ್ ಠಾಣೆ ಪಿಎಸ್‍ಐ ಕು.ಸಂಗೀತಾ, ಎ.ಎಸ್.ಐ ವಿಜಯಕುಮಾರ, ಸಿಬ್ಬಂದಿಗಳಾದ ವಿಷ್ಣುರೆಡ್ಡಿ, ಸುನೀಲ್, ಸಂಜೆಪ್ಪಾ, ನೀಲಕಂಠ, ಮಲ್ಲಿಕಾರ್ಜುನ, ರವಿಕಾಂತ, ಪ್ರಶಾಂತ, ಅಶೋಕ ಕೋಟೆ, ಶಿವಶಂಕರ, ಇಸ್ಮಾಯಿಲ್, ಕೈಲಾಸ್, ಮಹಾದೇವಿ ಅವರನ್ನೊಳಗೊಂಡ ತಂಡ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ಕಳ್ಳತನ ಮಾಡಿದ 6,65,000/- ರೂ ಮೌಲ್ಯದ 118 ಗ್ರಾಂ ಬಂಗಾರದ ಆಭರಣಗಳು, 60,000/- ರೂ ಮೌಲ್ಯದ 12.5 ಗ್ರಾಂ ಬೆಳ್ಳಿ ಆಭರಣಗಳು ಹಾಗೂ 1,97,000/- ರೂ ನಗದು ಹಣ ಹೀಗೆ ಒಟ್ಟು 9,22,000/- ರೂ ಮೌಲ್ಯದ ಆಭರಣಗಳು ಹಾಗೂ ನಗದು ಹಣ ಜಪ್ತಿ ಮಾಡಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.