ಮನೆ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯೊರ್ವನ ಬಂಧನ

ವಿಜಯಪುರ, ಸೆ.14-ನಗರದಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯೊರ್ವನನ್ನು ಬಂಧಿಸಲಾಗಿದೆ ಎಂದು ಪೋಲಿಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ ತಿಳಿಸಿದ್ದಾರೆ.
ಬಂಧಿತನನ್ನು ರಾಜು ತಂ. ಶಿವಾನಂದ ಹೊಸಮನಿ (25) ಉದ್ಯೋಗ: ಲಾರಿ ಚಾಲಕ ಸಾ: ಸಾವಳಸಂಗ ತಾ. ಇಂಡಿ ಹಾಲಿ: ಪಾಣಿನಗರ ವಿಜಯಪುರ. ಈತನನ್ನು ವಶಪಡಿಸಿಕೊಂಡು ಅವನು 04 ಮನೆಗಳನ್ನು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು, ಈ ಆರೋಪಿತನ ಕಡೆಯಿಂದ 04 ಪ್ರಕರಣಗಳಿಗೆ ಸಂಭಂಧಪಟ್ಟ ಒಟ್ಟು=233 ಗ್ರಾಂ. ಬಂಗಾರದ ಆಭರಣಗಳು ಮತ್ತು ಕೃತ್ಯಕ್ಕೆ ಬಳಸಿದ ಮೋಟರ ಸೈಕಲ್ ಸೇರಿ ಒಟ್ಟು-12,38,300/- ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.
ನಗರದಲ್ಲಿ ಇತ್ತಿಚಿಗೆ ಘಟಿಸುತ್ತಿದ್ದ ಮನೆ ಕಳ್ಳತನ ಪ್ರಕರಣಗಳ ತಪಾಸಣೆ ಕುರಿತು ಪೋಲಿಸ್ ವರಿಷ್ಠಾಧಿಕಾರಿಗಳು ಒಂದು ತಂಡವನ್ನು ರಚಿಸಿದ್ದು, ಹಾಗೂ ಅವರ ಮಾರ್ಗದರ್ಶನದಲ್ಲಿ ಮತ್ತು ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ವಿಜಯಪುರ, ಮತ್ತು ಉಪ-ಅಧೀಕ್ಷಕರು ವಿಜಯಪುರ, ರವರ ಮಾರ್ಗದರ್ಶನದಲ್ಲಿ ಬಸವರಾಜ ಮುಕರ್ತಿಹಾಳ ಸಿಪಿಐ ಗೋಲಗುಮ್ಮಜ ವೃತ್ತ ರವರ ನೇತೃತ್ವದಲ್ಲಿ ಹಾಗೂ ಎಸ್.ಬಿ.ಆಜೂರ ಪಿ.ಎಸ್.ಐ.(ಕಾ&ಸು) ಆದರ್ಶನಗರ ಠಾಣೆ, ಮತ್ತು ಸಿಬ್ಬಂದಿ ಜನರಾದ ಎಸ್.ಎಸ್.ಮಾಳೆಗಾಂವ್, ವೈ.ಪಿ.ಕಬಾಡೆ, ಸಂಜಯ ಬನಪಟ್ಟಿ, ಪಿ ಎಸ್ ಬಿರಾದಾರ, ಮಹೇಶ ಸಾಲಿಕೇರಿ, ಬಿ ಕೆ ರೋಣಿಹಾಳ, ಎನ್ ಬಿ ವಠಾರ, ಗೋಲ್ಲಾಳ ಇಳಜೇರಿ ಇವರನ್ನೊಳಗೊಂಡ ತನಿಖಾ ತಂಡವು ದಿ.12.09.2020 ರಂದು ಆರೋಪಿತರ ತಪಾಸಣೆಯಲ್ಲಿದ್ದಾಗ ವಿಜಯಪುರ ನಗರದ, ಸೋಲಾಪೂರ ನಾಕಾ ಹತ್ತಿರ ತಪಾಸÀನೆ ಮಾಡುತ್ತಿದ್ದಾಗ ಆರೋಪಿತ ರಾಜು ತಂ| ಶಿವಾನಂದ ಹೊಸಮನಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಅವನು 04 ಮನೆಗಳನ್ನು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು, ಈ ಆರೋಪಿತನ ಕಡೆಯಿಂದ 04 ಪ್ರಕರಣಗಳಿಗೆ ಸಂಭಂಧಪಟ್ಟ ಒಟ್ಟು 233 ಗ್ರಾಂ. ಬಂಗಾರದ ಆಭರಣಗಳು ಮತ್ತು ಕೃತ್ಯಕ್ಕೆ ಬಳಸಿದ ಮೋಟರ ಸೈಕಲ್ ಸೇರಿ ಒಟ್ಟು-12,38,300 ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
1) ಆದರ್ಶನಗರ ಪೊಲೀಸ್ ಠಾಣೆ ಅಪರಾಧ ಈ ಪ್ರಕರಣದಲ್ಲಿ 102.5 ಗ್ರಾಂ ಬಂಗಾರದ ಬಂಗಾರದ ಆಭರಣಗಳು, 2) ಜಲನಗರ ಪೊಲೀಸ್ ಠಾಣೆ ಅಪರಾಧ
100 ಗ್ರಾಂ. ಬಂಗಾರದ ಆಭರಣಗಳು, 3) ಗೋಲಗುಂಬಜ್ ಪೊಲೀಸ್ ಠಾಣೆ ಅಪರಾಧ ಪ್ರಕರಣದಲ್ಲಿ 20 ಗ್ರಾಂ. ಬಂಗಾರದ ಆಭರಣಗಳು ಹಾಗೂ 4) ಗೋಲಗುಂಬಜ್ ಪೊಲೀಸ್ ಠಾಣೆ ಅಪರಾಧ ಈ ಪ್ರಕರಣದಲ್ಲಿ 10.5 ಗ್ರಾಂ. ಬಂಗಾರದ ಆಭರಣಗಳ ಕಳುವು ಮಾಡಿದ ಪ್ರಕರಣಗಳು ದಾಖಲಾಗಿವೆ.
ಕೃತ್ಯಕ್ಕೆ ಬಳಿಸಿದ ಬಜಾಜ ಕಂಪನಿಯ ಪಲ್ಸರ್ ಮೋಟರ್ ಸೈಕಲ್ ಒಂದು, ನೊಂದಣಿ ಸಂಖ್ಯೆ ಕೆಎ 28 ಈಎಲ್ 0976, ಕೆಂಪ್ಪು ಮಿಶ್ರಿತ ಕಪ್ಪು ಬಣ್ಣದ್ದು, ಅಂದಾಜು ಕಿಮ್ಮತ್ತ-50,000 ರೂ. ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಕಾರ್ಯನಿರ್ವಹಿಸಿದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳ ಕರ್ತವ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಶ್ಲಾಘಿಸಿ, ಬಹುಮಾನ ಘೋಷಿಸಿದ್ದಾರೆ.